ಕುಮಟಾ: ತಾಲೂಕಿನ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಕಾಲೇಜಿನ ಕೊಠಡಿಯ ಬೀಗ ಮುರಿದು ಅಲ್ಮೆರಾ ಲಾಕರ್ ಮುರಿದು ಬರೋಬ್ಬರಿ 2 ಲಕ್ಷ 16 ಸಾವಿರ ರೂಪಾಯಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.ತಡರಾತ್ರಿ ಈ ಈ ಕಳ್ಳತನ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ,ಕಾರವಾರದಿಂದ ಬೆರಳಚ್ಚು ತಜ್ಙರು ಆಗಮಿಸಿದ್ದು ಪರೀಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.ಕುಮಟಾ ಪೋಲೀಸರು ಪ್ರಕರಣ ದಾಖಲಾಸಿಕಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಮಂಜುನಾಥ ಹರಿಜನ