ರವಿ ಜಯರಾಮ್ ಎಂಬುವರೇ ಹನಿ ಟ್ರ್ಯಾಪ್‌ನಲ್ಲಿ ಸಿಲುಕಿ ಉದ್ಯೋಗ ಕಳೆದುಕೊಂಡಿರುವ ವ್ಯಕ್ತಿ. ಪಾರ್ಟಿಯಲ್ಲಿ ಭವಾನಿ ಅವರನ್ನು ರವಿ ಜಯರಾಮ್ ಭೇಟಿಯಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿತ್ತು. ಮಹಿಳೆಗೆ ಹಣ ಸಹಾಯವನ್ನು ರವಿ ಮಾಡಿದ್ದರು. ಭವಾನಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದರು. ಒಟ್ಟಿಗೆ ಹತ್ತಾರು ಬಾರಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದರು. ಬಳಿಕ ಖಾಸಗಿ ವಿಡಿಯೋಗಳನ್ನು ಸೆರೆಹಿಡಿಯಲಾಗಿತು.
ನಂತರದ ದಿನಗಳಲ್ಲಿ ಭವಾನಿಯ ಅಸಲಿ ಮುಖವಾಡ ಬೆಳಕಿಗೆ ಬಂದಿದೆ. ಬ್ಲಾಕ್ ಮೇಲ್ ಮಾಡಲು ಭವಾನಿ ಗ್ಯಾಂಗ್ ಶುರು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಲಾಗಿತು.
ನಿರಾಕರಿಸಿದಾಗ ದೂರುದಾರನ ಪತ್ನಿಗೂ ತಾವಿಬ್ಬರೇ ಇರುವ ಖಾಸಗಿ ವಿಡಿಯೋ ಫೊಟೋಗಳನ್ನು ಭವಾನಿ ಸೆಂಡ್ ಮಾಡಿದ್ದಳು. ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡೋದಾಗಿ ಬೆದರಿಕೆ ಹಾಕಿದ್ದಳು. ಈ ಹಿನ್ನಲೆಯಲ್ಲಿ ಹಂತ ಹಂತವಾಗಿ 20 ಲಕ್ಷ ರೂ.ಗಳನ್ನು ರವಿ ಜಯರಾಮ್ ನೀಡಿದ್ದ. ಭವಾನಿಗೆ ಸ್ವತಃ ಆಕೆಯ ತಾಯಿ, ತಮ್ಮ, ತಂಗಿ ಸೇರಿ ಇಡೀ ಕುಟುಂಬ ಸಾಥ್ ನೀಡಿತ್ತು.
ದೂರಿನಲ್ಲಿ ಇಡಿ ಕುಟುಂಬದ ಹೆಸರನ್ನ ರವಿ ಜಯರಾಮ್ ದಾಖಲಿಸಿದ್ದಾರೆ. ನಂತರ ಆಕೆಗೆ ಈಗಾಗಲೆ ಎರಡು ಮದುವೆ ಆಗಿರುವ ವಿಚಾರ ಗೊತ್ತಾಗಿದೆ. ಒಂದು ಡಿವೋರ್ಸ್ ಆಗಿದ್ದು ಮತ್ತೊಂದು ಡಿವೋರ್ಸ್ ಪ್ರಕರಣ ನ್ಯಾಯಾಲಯದಲ್ಲಿದೆ.
ರವಿ ಜಯರಾಮ್ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಬಳಿ ಕೂಡ ಭವಾನಿ ಬಂದು ಗಲಾಟೆ ಮಾಡಿದ್ದರಿಂದ, ಕಂಪನಿ ಆತನನ್ನು ಉದ್ಯೋಗದಿಂದ ವಜಾಗೊಳಿಸಿತ್ತು. ಕೊನೆಗೆ ಈಕೆ ವಿರುದ್ಧ ಜಯರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈಕೆಯನ್ನು ಕರೆಸಿದಾಗ
ದೂರು ದಾಖಲಾದರೆ ಡಿಸಿಪಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಆರೋಪಿ ಭವಾನಿ ಬೆದರಿಸಿದ್ದಾರೆ. ಡಿಸಿಪಿ, ಎಸಿಪಿ ಕಚೇರಿ ಮುಂದೆಯೇ ಮಹಿಳೆ ಹೈಡ್ರಾಮಾ ಮಾಡಿದ್ದಳು.
ಇತ್ತ ಕೈತುಂಬ ಕೆಲಸವೂ ಇಲ್ಲದೆ , ಹೆಂಡತಿಯನ್ನೂ ಕಳೆದುಕೊಂಡು ರವಿ ಜಯರಾಮ್ ಅಲೆದಾಡುವ ಪರಿಸ್ಥಿತಿ ಬಂದಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.