ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹೆಚ್. ಬಸಾಪುರ ಗೇಟ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ, 26 ವರ್ಷದ ನವವಧು ಶರಣ್ಯ ಮೃತಪಟ್ಟಿದ್ದಾರೆ. ಬಾಳೆಹೊನ್ನಿಗ ಗ್ರಾಮದ ಕೃಷ್ಣೇಗೌಡ ಅವರ ಮಗಳಾದ ಶರಣ್ಯ, ಇನ್ನೇನು 20 ದಿನಗಳಲ್ಲಿ ಮದುವೆಯ ಹಸೆಮಣೆ ಏರಬೇಕಾಗಿದ್ದರು.
ಕನಕಪುರ ತಾಲ್ಲೂಕಿನ ಕಾಡನಹಳ್ಳಿ ಗ್ರಾಮಪಂಚಾಯತ್‌ನಲ್ಲಿ ನರೇಗಾ ಯೋಜನೆಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶರಣ್ಯ, ಶನಿವಾರ ಬೆಳಗ್ಗೆ 10.30ರ ಸಮಯದಲ್ಲಿ ಕೆಲಸದ ನಿಮಿತ್ತ ಬಾಳೆಹೊನ್ನಿಗ ಗ್ರಾಮದಿಂದ ಹಲಗೂರು ಕಡೆಗೆ ತಮ್ಮ ಹೊಂಡಾ ಡಿಯೋದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.