ರಾಜಸ್ಥಾನದ ಬೇವಾರ ಜಿಲ್ಲೆಯ ವಿಜಯನಗರದಲ್ಲಿ, ಅಪ್ರಾಪ್ತ ಬಾಲಕಿಯರ ಬ್ಲ್ಯಾಕ್ಮೇಲ್, ಲೈಂಗಿಕ ದೌರ್ಜನ್ಯ ಮತ್ತು ಬಲವಂತ ಮತಾಂತರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪೊಲೀಸರು 12 ರಿಂದ 15 ಮಂದಿಯ ಮುಸ್ಲಿಂ ಗ್ಯಾಂಗ್ ಅನ್ನು ಬಂಧಿಸಿದ್ದಾರೆ.

ಸಂತ್ರಸ್ತೆಯ ಕುಟುಂಬದವರು ದೂರು ನೀಡಿದ ನಂತರ, ಈ ಪ್ರಕರಣ ಬಹಿರಂಗವಾಯಿತು. ತನಿಖೆಯಲ್ಲಿ, ಗ್ಯಾಂಗ್‌ನವರು ಅಪ್ರಾಪ್ತ ಶಾಲಾ ಬಾಲಕಿಯರನ್ನು ಬ್ಲ್ಯಾಕ್ಮೇಲ್ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ ಮತಾಂತರ ಮಾಡಲು ಸಂಚು ರೂಪಿಸಿದ್ದರೆಂದು ತಿಳಿದುಬಂದಿದೆ. ವಿಶೇಷವಾಗಿ, ಬ್ರಾಹ್ಮಣ ಹುಡುಗಿಯರನ್ನು ಬಲೆಗೆ ಬೀಳಿಸಲು 20 ಲಕ್ಷ ರೂಪಾಯಿ, ದಲಿತ ಹುಡುಗಿಯರಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಗಮನಾರ್ಹವಾಗಿ, ಎಲ್ಲಾ ಆರೋಪಿಗಳು ಅನಕ್ಷರಸ್ಥರಾಗಿದ್ದಾರೆ.

ಈ ಪ್ರಕರಣವನ್ನು 1992ರ ಅಜ್ಮೇರ ಬ್ಲ್ಯಾಕ್ಮೇಲ್ ಪ್ರಕರಣಕ್ಕೆ ಹೋಲಿಸಲಾಗುತ್ತಿದೆ, ಅಲ್ಲಿ ಅಪ್ರಾಪ್ತ ಹಿಂದೂ ಶಾಲಾ ಬಾಲಕಿಯರನ್ನು ಗುರಿಯಾಗಿಸಲಾಗಿತ್ತು.

ಒಬ್ಬ ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಆರೋಪಿ ಯುವಕನ ಗುಂಪಿನಲ್ಲಿ ಅನೇಕ ಹುಡುಗರು ಇದ್ದಾರೆ, ಅವರು ಸಂಚು ಮಾಡಿ ಹುಡುಗಿಯರನ್ನು ಮತಾಂತರಿಸುತ್ತಿದ್ದರು. ಈ ಹುಡುಗಿಯರನ್ನು ಬಲೆಗೆ ಬೀಳಿಸಲು ಹುಡುಗರು ಪ್ರತಿದಿನ ಹೊಸ ಕಾರುಗಳನ್ನು ತರುತ್ತಿದ್ದರು. ಕೆಲವೊಮ್ಮೆ ಮೋಟಾರ್ ಸೈಕಲ್, ಕೆಲವೊಮ್ಮೆ ಬುಲೆಟ್ ಹೀಗೆ ಬೇರೆ ಬೇರೆ ವಾಹನಗಳನ್ನು ತರುತ್ತಿದ್ದರು. ಒಂದುವೇಳೆ ನಾವು ಬ್ರಾಹ್ಮಣರ ಹುಡುಗಿಯನ್ನು ಮಾರಿದರೆ ನಮಗೆ 20 ಲಕ್ಷ ರೂಪಾಯಿಗಳು ಸಿಗುತ್ತವೆ ಮತ್ತು ನಿಮ್ಮನ್ನು (ದಲಿತರನ್ನು) ಮಾರಿದರೆ ಅವರಿಗೆ 10 ಲಕ್ಷ ರೂಪಾಯಿಗಳು ಸಿಗುತ್ತವೆ ಎಂದು ಹೇಳಿದ್ದರು.

ಆ ಗ್ಯಾಂಗ್‌ನಲ್ಲಿದ್ದ ಮುಸ್ಲಿಮರು ಹುಡುಗಿಯರನ್ನು ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದರು. ಈ ಯುವಕರು ಹುಡುಗಿಯರ ಮೇಲೆ ‘ಕಲಮಾ’ ಪಠಿಸಲು ಮತ್ತು ಉಪವಾಸಗಳನ್ನು ಮಾಡಲು ಒತ್ತಡ ಹೇರಿದರು. ಇದಕ್ಕಾಗಿ ಅವರು ಈ ಹುಡುಗಿಯರ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಮಾಡುವುದಾಗಿ ಬೆದರಿಕೆ ಹಾಕಿದರು.

ಈ ಪ್ರಕರಣದಲ್ಲಿ ಪೊಲೀಸರು 3 ದೂರುಗಳನ್ನು ದಾಖಲಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ರಿಹಾನ ಮಹಮ್ಮದ, ಸೊಹೈಲ ಮನ್ಸೂರಿ, ಲುಕಮಾನ, ಅರ್ಮಾನ ಪಠಾಣ ಮತ್ತು ಸಾಹಿಲ ಖುರೇಷಿ ಸೇರಿದ್ದಾರೆ. ಪೊಲೀಸರು ಇನ್ನೂ ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳನ್ನು ಪೊಲೀಸರು ಅಜ್ಮೇರ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ವಕೀಲರು ಅವರನ್ನು ಥಳಿಸಿದರು. ನಾಲ್ಕು ದಿನಗಳ ಹಿಂದೆಯೂ ಇದೇ ರೀತಿ ವಕೀಲರು ಆರೋಪಿಗಳನ್ನು ಥಳಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಇನ್ನೊಂದೆಡೆ, ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಸರ್ವ ಸಮಾಜ ಸಂಘರ್ಷ ಸಮಿತಿಯು ನಗರದಲ್ಲಿ ಬಂದ್ ಆಚರಿಸಿತು. ಈ ಪ್ರಕರಣದಲ್ಲಿ 7 ಆರೋಪಿಗಳಲ್ಲದೆ, 3 ಅಪ್ರಾಪ್ತ ಹುಡುಗರೂ ಆರೋಪಿಗಳಾಗಿದ್ದಾರೆ.

Leave a Reply

Your email address will not be published. Required fields are marked *

Related News

error: Content is protected !!