RBI ಚಲಾವಣೆಯಿಂದ 2000 ರೂ. ಕರೆನ್ಸಿ ನೋಟನ್ನು ಹಿಂತೆಗೆದುಕೊಂಡಿದೆ. ಆದರೆ ಅದು ಕಾನೂನುಬದ್ಧವಾಗಿ ಮುಂದುವರಿಯುತ್ತದೆ. 2000 ರೂ. ಮುಖಬೆಲೆಯ ನೋಟುಗಳನ್ನು ನೀಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ನೀಡಿದೆ,
2000 ರೂ. ನೋಟು ನೀಡದಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಹಾಲಿ ಇರುವ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
2018 ರಲ್ಲಿ 2000 ನೋಟು ಮುದ್ರಣ ಸ್ಥಗಿತಗೊಳಿಸಲಾಗಿತ್ತು. 2000 ನೋಟು ಚಲಾವಣೆಯನ್ನು ಆರ್ಬಿಐ ವಾಪಸ್ ಪಡೆದುಕೊಂಡಿದೆ. 2016ರ ನವೆಂಬರ್ ನಲ್ಲಿ 2000 ರೂ. ನೋಟು ಚಲಾವಣೆಗೆ ತರಲಾಗಿತ್ತು. ಸೆಪ್ಟೆಂಬರ್ 30ರವರೆಗೆ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ. 20,000 ರೂ.ವರೆಗೆ ಖಾತೆಗೆ ಜಮಾ ಮಾಡಬಹುದಾಗಿದೆ. ಬ್ಯಾಂಕುಗಳಲ್ಲಿ 2000 ರೂ. ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಸೆ. 30ರವರೆಗೂ ಅವಕಾಶ ಕಲ್ಪಿಸಲಾಗಿದೆ. ಮೇ 23ರ ನಂತರ ನೋಟು ಬದಲಾವಣೆ ಮಾಡಬಹುದು. ಒಂದು ದಿನಕ್ಕೆ ಬ್ಯಾಂಕುಗಳಲ್ಲಿ 20 ಸಾವಿರ ರೂ. ಡಿಪಾಸಿಟ್ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ದೇಶಾದ್ಯಂತ 2000 ರೂ. ನೋಟು ಬ್ಯಾನ್ ಮಾಡಲಾಗಿದೆ. ಸೆಪ್ಟೆಂಬರ್ 30ರ ನಂತರ 2000 ರೂ. ನೋಟು ಚಲಾವಣೆಯಲ್ಲಿ ಇರುವುದಿಲ್ಲ.

 

error: Content is protected !!