ಮೂರು ವರ್ಷದ ಮಗು ತನ್ನ ತಾಯಿಯನ್ನ ಜೈಲಿಗೆ ಹಾಕಿ ಅಂತಾ ಪೊಲೀಸ್ ಠಾಣೆಗೆ ತೆರಳಿದ ಕಂಪ್ಲೆಂಟ್ ಕೊಟ್ಟಿದ್ದಾನೆ. ಪುಟಾಣಿ ಕಂಪ್ಲೆಂಟ್ ಕೊಟ್ಟಿದ್ಯಾಕೆ ಅನ್ನೋದೇ ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಅಂದಹಾಗೆ ಈ ಘಟನೆ ನಡೆದಿರೋದು ಮಧ್ಯಪ್ರದೇಶದ ಬುರ್ಹಾನ್ ಪುರ ಜಿಲ್ಲೆಯ ಡೆಡ್ತಲೈ ಅನ್ನೋ ಪ್ರದೇಶದಲ್ಲಿ ಮೂರು ವರ್ಷದ ಮಗು ತನ್ನ ತಂದೆಯನ್ನ ಠಾಣೆಗೆ ಕರೆದುಕೊಂಡು ಬಂದು ತಾಯಿಯ ವಿರುದ್ಧ ಕಂಪ್ಲೆಂಟ್ ಕೊಟ್ಟಿದ್ದಾನೆ. ಪೊಲೀಸರು ಈ ಪುಟಾಣಿಯ ತೊದಲು ನುಡಿಗಳನ್ನ ಕೇಳಿ ದೂರನ್ನೂ ಬರೆದುಕೊಂಡಿದ್ದಾರೆ. ಆದ್ರೆ ಮಗು ಕಂಪ್ಲೆಂಟ್ ಕೊಟ್ಟಿರೋದು ತಾಯಿ ತನ್ನ ಚಾಕಲೇಟ್ ಗಳನ್ನ ಕದ್ದು ಮುಚ್ಚಿಡುತ್ತಾರೆ ಎಂದು..
ಚಿಕ್ಕ ಮಕ್ಕಳು ಏನೇ ಮಾಡಿದರೂ ಖುಷಿಯಾಗುತ್ತದೆ. ಅವರ ಮುಗ್ಧ ವರ್ತನೆಗಳು ನಮ್ಮ ಮುಖದಲ್ಲಿ ನಗು ತರಿಸುತ್ತವೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಡೆಡ್ತಲೈ ಗ್ರಾಮದಲ್ಲಿ ಇಂತಹದ್ದೇ ಘಟನೆ ನಡೆದಿದೆ. ತನ್ನ ತಾಯಿ ತನಗೆ ಚಾಕೊಲೇಟ್ ತಿನ್ನಲು ಬಿಡುತ್ತಿಲ್ಲ, ಚಾಕಲೆಟ್ ಗಳನ್ನ ಮುಚ್ಚಿಡ್ತಾಳೆಂದು ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಅಲ್ದೆ ತನ್ನ ತಾಯಿಯನ್ನ ಬಂಧಿಸಿ ಜೈಲಿಗೆ ಹಾಕಿ ಎಂದಿದ್ದಾನೆ.
ಪುಟಾಣಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಜೊತೆಗೆ ಮುಗುವಿನ ಮುಗ್ದತೆಯ ಜೊತೆ ಪೊಲೀಸರು ಮಗುವಿನ ಜೊತೆ ನಡೆದುಕೊಂಡ ರೀತಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
ಬುರ್ಹಾನ್ ಪುರ ನಿವಾಸಿಯೊಬ್ಬರು ತನ್ನ ಮೂರು ವರ್ಷದ ಮಗು ಮನೆಯಲ್ಲಿ ಚಾಕಲೇಟ್ ಕೇಳಿದ್ದಕ್ಕೆ ತಾಯಿ ಕೊಡಲ್ಲ ಎಂದಿದ್ದಾರೆ. ಅಲ್ದೆ, ಪುಟಾಣಿಗೆ ಗದರಿದ್ದಾರೆ ಇದರಿಂದ ಸಿಟ್ಟಾದ ಮಗು, ತಂದೆಯ ಬಳಿ ಬಂದು ತನ್ನನ್ನ ಪೊಲೀಸ್ ಸ್ಟೇಷನ್ ಗೆ ಕರೆದೊಯ್ಯುವಂತೆ ಹೇಳಿದೆ.
ತಂದೆಯೂ ಮಗುವನ್ನ ಪೊಲೀಸ್ ಠಾಣೆಗೆ ಕರೆದು ಕೊಂಡು ಬಂದಿದ್ದಾರೆ. ಅಲ್ಲಿನ ಸಿಬ್ಬಂದಿಗೆ ತಂದೆ ವಿಷಯವನ್ನ ತಿಳಿಸಿದಾಗ, ಠಾಣೆ ಮಹಿಳಾ ಸಬ್ ಇನ್ಸ್ ಪೆಕ್ಟರ್ ಪ್ರಿಯಾಂಕಾ ಮಗು ಹೇಳಿದ್ದನ್ನ ದೂರನ್ನ ಬರೆದುಕೊಂಡಿದ್ದಾರೆ. ಈ ವೇಳೆ ಮಗು ತನ್ನ ತಾಯಿ ತನಗೆ ಚಾಕಲೇಟ್ ತಿನ್ನೋಕೆ ಬಿಡಲ್ಲ, ಎಲ್ಲವನ್ನೂ ಮುಚ್ಚಿಡುತ್ತಾಳೆ ಎಂದು ಹೇಳಿದೆ ಇದಕ್ಕೆ ನಗುತ್ತಲೇ ದೂರು ಬರೆದುಕೊಂಡ ಎಸ್ ಐ ಮಗುವನ್ನ ಮುದ್ದು ಮಾಡಿ ಕಳುಹಿಸಿದ್ದಾರೆ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…