ವಿದ್ಯಾಭ್ಯಾಸ ಮುಗಿಸಿದಂತವರು ಹಾಗೂ ಕೆಲಸವಿಲ್ಲದೆ ಹಳ್ಳಿಗಳಲ್ಲಿ ಪರದಾಡುತ್ತಿರುವವರು ದೊಡ್ಡ ದೊಡ್ಡ ಪಟ್ಟಣಗಳತ್ತ ಕೆಲಸ ಹುಡುಕಿಕೊಂಡು ಹೋಗುವುದು ಸರ್ವೇ ಸಾಮಾನ್ಯ. ಅದೇ ರೀತಿ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳ ಎಷ್ಟೊ ಜನರು ಹಾಗೂ ಆಗತಾನೆ ವಿದ್ಯಾಭ್ಯಾಸ ಮುಗಿಸಿರುವಂತಹ ವಿದ್ಯಾರ್ಥಿಗಳು ಕೆಲಸಕ್ಕೆಂದು ಬೆಂಗಳೂರಿನತ್ತ ಮುಖ ಮಾಡುತ್ತಾರೆ. ಹಲವು ಕನಸುಗಳನ್ನು ಇಟ್ಟುಕೊಂಡು ಬೆಂಗಳೂರಿಗೆ ಬರುವ ಇಂಥವರನ್ನೇ ಬಂಡವಾಳ ಮಾಡಿಕೊಂಡಿರುವ ಅದೆಷ್ಟೋ ನಕಲಿ ಕಂಪನಿಗಳು ಇಂತಹ ಅಮಾಯಕ ಜನರ ಬಳಿ ಹಣವನ್ನು ಕಸಿದು ಪಂಗನಾಮ ಹಾಕುತ್ತಿದ್ದಾರೆ. ಹೊಸಬರು ಗಳು ಹಾಗೂ ಕೆಲಸ ಹುಡುಕಿಕೊಂಡು ಬರುವಂಥವರು ಹೆಚ್ಚಾಗಿ ಕಾಣಸಿಗುವಂತಹ ಸ್ಥಳಗಳಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಬರೆದಿರುವಂತಹ ಸಾವಿರಾರು ಕಾಗದಗಳನ್ನು ಗೋಡೆಗಳಿಗೆ ಹಾಗೂ ಕಂಬಗಳಿಗೆ ಮತ್ತು ಮರಗಳಿಗೆ ಆಂಟಿಸಿರುತ್ತಾರೆ. ಏನು ಅರಿಯದ ಅಮಾಯಕರು ಇದನ್ನು ಕಂಡು ಸತ್ಯವೆಂದು ನಂಬಿ. ಹಲ್ಲಿ ಬರೆದಿರುವಂತಹ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುತ್ತಾರೆ. ಒಮ್ಮೆ ಕರೆ ಮಾಡಿದರೆ ಮುಗಿಯಿತು. ಯಾವುದೇ ಕಾರಣಕ್ಕೂ ಇವರನ್ನು ಅವರುಗಳು ಬಿಡುವುದಿಲ್ಲ. ಇಲ್ಲಸಲ್ಲದ ಬೊಗಳೆ ಮಾತುಗಳನ್ನಾಡುತ್ತಾ ಆಸೆಗಳನ್ನು ಹುಟ್ಟಿಸಿ ದೊಡ್ಡ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡುತ್ತಾರೆ. ನಂತರ ಅಪ್ಲಿಕೇಶನ್ ಗೆಂದು ಮತ್ತು ಜೋಯಿನಿಂಗ್ ಫೀಸ್ ಎಂದು ಎರಡು ಸಾವಿರದಿಂದ ಐದು ಸಾವಿರದವರೆಗೆ ಕೇಳುತ್ತಾರೆ. ಕೆಲವರು ೫ ಸಾವಿರಕ್ಕಿಂತ ಹೆಚ್ಚಾಗಿಯೇ ಕೇಳುತ್ತಾರೆ. ಹಾಗೂ ಒಮ್ಮೆ ಪಾವತಿಸಿರುವ ಹಣವನ್ನು ಮರುಪಡೆಯಲು ೯೦ ದಿನಗಳವರೆಗೂ ಕಾಯಬೇಕು ಎಂದು ಬರೆಸಿ ಕೊಂಡಿರುತ್ತಾರೆ. ಕೆಲಸದ ಆಸೆಗೆ ಬಿದ್ದಿರುವ ಅಮಾಯಕರು ಹಣವಿಲ್ಲದಿದ್ದರೂ ಎಲ್ಲಿಂದಲಾದರೂ ಹೊಂಚಿಕೊಂಡು ತಂದು ಇಂಥವರ ಬಾಯಿಗೆ ಹಾಕುತ್ತಾರೆ. ಒಮ್ಮೆ ಹಣ ನೀಡಿದರೆ ಮುಗಿಯಿತು ನಿಮಗೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂಬ ರೀತಿಯಲ್ಲಿ ಪ್ರತಿಕ್ರಿಯಿಸಲು ಮುಂದಾಗುತ್ತಾರೆ. ಪ್ರತಿಕ್ರಿಯಿಸಲು ಹಿಂಜರಿಯುತ್ತಿರುವ ಇವರು ಕೆಲಸ ಕೊಡಿಸುವರೇ, ಇಲ್ಲ. ಯಾವುದೇ ಕಾರಣಕ್ಕೂ ಇವರುಗಳು ಕೆಲಸ ಕೊಡಿಸುವುದಿಲ್ಲ. ಒಂದು ವೇಳೆ ತಾವುಗಳು ಇವರುಗಳನ್ನು ಬಿಟ್ಟುಬಿಡದೆ ಕಾಡಲು ಮುಂದಾದರೆ ತಮಗೆ ಸೂಕ್ತವಲ್ಲದ ಕೆಲಸವನ್ನು ಕೊಡಿಸಿ ಎರಡರಿಂದ ಮೂರು ದಿನಗಳ ಕಾಲ ಕೆಲಸ ಮಾಡಿಸಿ ತಮ್ಮನ್ನು ಕೆಲಸದಿಂದ ತೆಗೆಯುತ್ತಾರೆ. ಒಂದು ವೇಳೆ ತಾವು ಮೊದಲೇ ಪಾವತಿಸಿರುವ ವಂತಹ ಹಣವನ್ನು ಹಿಂದಿರುಗಿಸಲು ಕೇಳಿದರೆ ಮೊದಲೇ ಹೇಳಿದ ಹಾಗೆ ೯೦ ದಿನಗಳವರೆಗೂ ಕಾಯಲು ಹೇಳುತ್ತಾರೆ. ೯೦ ದಿನಗಳು ಕಾದರೂ ಸಹ ತಮಗೆ ಸಂಪೂರ್ಣ ಹಣವನ್ನು ಮರು ಪಾವತಿಸುವುದಿಲ್ಲ. ಇಲ್ಲಸಲ್ಲದ ಶುಲ್ಕಗಳ ಹೆಸರನ್ನು ಹೇಳಿ ಕಡಿತ ಮಾಡಿದ್ದೇವೆ ಎಂದು ತಾವುಗಳು ಪಾವತಿಸಿರುವುದು ರಲ್ಲಿ ಶೇಕಡ ೩೦ ರಿಂದ ೪೦ ರಷ್ಟು ಮಾತ್ರ ಹಿಂದಿರುಗಿಸುತ್ತಾರೆ ಅದು ಅವರಿಗೆ ಇಷ್ಟ ಬಂದಾಗ. ಶಿವಮೊಗ್ಗ ಹಾಗೂ ತುಮಕೂರಿನ ಕೆಲ ಕೂಲಿಕಾರ್ಮಿಕರ ಮಕ್ಕಳು ಕೆಲವು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಇಂತಹ ನಕಲಿ ಕಂಪನಿಯೊಂದರ ಬಲೆಗೆ ಬಿದ್ದಿದ್ದಾರೆ. ೨೦ರಿಂದ ೩೦ ಸಾವಿರ ಸಂಬಳ ಕೊಡಿಸುತ್ತೇವೆ ಎಂದು ಕರೆಸಿಕೊಂಡು. ಪ್ರತಿಯೊಬ್ಬರ ಬಳಿಯೂ ಎರಡರಿಂದ ಐದು ಸಾವಿರದವರೆಗೆ ಹಣ ಪಡೆದಿದ್ದಾರೆ. ಕೆಲವರು ಗಾರೆ ಕೆಲಸ ಮಾಡಿ ಹಣ ತಂದರೆ ಇನ್ನು ಕೆಲವರು ಸಾಲ ಮಾಡಿ ಹಣ ತಂದು ನೀಡಿದ್ದಾರೆ. ಹಣ ನೀಡಿದ ನಂತರ ಇವರುಗಳಿಗೆ ಯಾವುದೇ ರೀತಿಯ ಕೆಲಸವನ್ನು ಕೊಡಿಸದೆ ತಾವುಗಳು ತಮ್ಮ ಊರಿಗೆ ಹೋಗಿ ನಾವೇ ಕರೆ ಮಾಡುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ. ತಿಂಗಳುಗಳೇ ಕಳೆದರೂ ಸಹ ಇವರುಗಳಿಗೆ ಯಾವುದೇ ರೀತಿಯ ಕರೆ ಮಾಡಿರುವುದಿಲ್ಲ ಹಾಗೂ ಕೆಲಸವನ್ನು ಸಹ ಕೊಡಿಸಿರುವುದಿಲ್ಲ. ಇಂದು ಕರೆ ಮಾಡುತ್ತಾರೆ ನಾಳೆ ಕರೆ ಮಾಡುತ್ತಾರೆ ಎಂಬ ಭರವಸೆಯಲ್ಲಿ ತಿಂಗಳುಗಳ ಗಟ್ಟಲೆ ಕಾದು ಬೇಸತ್ತ ಅಮಾಯಕರು ತಾವುಗಳೇ ಕರೆ ಮಾಡಲು ಮುಂದಾದರು ಸಹ ಕೆಲಸ ಕೊಡಿಸುವ ಕಂಪನಿಯವರು ಕರೆ ಸ್ವೀಕರಿಸದೇ ಸ್ವೀಕರಿಸಿದರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸದೆ ಸತಾಯಿಸಲು ಮುಂದಾಗಿದ್ದಾರೆ. ಕೆಲಸ ಮಾಡಿ ಸಂಬಳ ಪಡೆಯಬೇಕೆಂಬ ಆಸೆಯಲ್ಲಿ ಬಂದವರು ಇಂದು ತಾವು ನೀಡಿರುವ ಹಣವನ್ನೇ ಹಿಂಪಡೆಯಲು ಹರಸಾಹಸಪಡುತ್ತಿದ್ದಾರೆ. ನಕಲಿ ಕಂಪನಿಗಳ ಭರವಸೆಗಳಿಗೆ ಬೆರಗಾದವರು ಇವರೆ ಮೊದಲೇನಲ್ಲ ಇಂತಹ ಸಾಕಷ್ಟು ಉದಾಹರಣೆಗಳಿವೆ. ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸದ ಕಾರಣ ನೀಡಿರುವ ಹಣವನ್ನು ಹಿಂಪಡೆಯಬೇಕಾದರೆ ಕಂಪನಿ ಅವರನ್ನು ಭೇಟಿ ಮಾಡಲೇಬೇಕು. ಭೇಟಿ ಮಾಡಬೇಕೆಂದರೆ ಬೆಂಗಳೂರಿಗೆ ಬರಲೇಬೇಕು ದೂರದೂರಿನಿಂದ ಬೆಂಗಳೂರಿಗೆ ಮತ್ತೆ ಹಣವನ್ನು ಖರ್ಚು ಮಾಡಿಕೊಂಡು ಹೋದರು ಸಹ ಪ್ರಯೋಜನವಾಗುತ್ತದೆಯೊ ಇಲ್ಲವೋ ಎಂದು ಆಲೋಚಿಸುತ್ತಾ ಎಷ್ಟೋ ಜನರು ಹಣ ಕಳೆದುಕೊಂಡು ದೂರನ್ನು ಸಹ ನೀಡದೆ ಸುಮ್ಮನಾಗಿದ್ದಾರೆ. ಕೆಲವೊಬ್ಬರು ಹಣ ಹಿಂಪಡೆಯಬೇಕೆಂದು ಬೆಂಗಳೂರಿಗೆ ಬಂದು ನೀಡಿರುವ ಹಣಕ್ಕಿಂತ ಹೆಚ್ಚಾಗಿ ಹಣವನ್ನು ವೆಚ್ಚ ಮಾಡಿ ಮತ್ತೆ ಬೆಂಗಳೂರಿನತ್ತ ಮುಖ ಮಾಡುವುದಿಲ್ಲ ಎಂದು ಬೇಸರದಿಂದ ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ೨೦ ವಯಸ್ಸಿಗಿಂತ ಕಡಿಮೆ ಇರುವವರೇ ಇಂತಹ ನಕಲಿ ಕಂಪನಿಗಳ ಬಲೆಗೆ ಹೆಚ್ಚಾಗಿ ಬೀಳುತ್ತಿರುವುದು. ಅತಿ ಬೇಗ ಹಣ ಸಂಪಾದಿಸಬೇಕು ಎಂಬ ಆಸೆಯಿಂದ ಯುವಪೀಳಿಗೆಯು ಇಂತಹ ನಕಲಿ ಕಂಪನಿಗಳ ಬಲೆಗೆ ಬೀಳುತ್ತಿದೆ. ಯಾವುದನ್ನೇ ಆಗಲಿ ಬೇಗ ಸಂಪಾದಿಸಬೇಕೆಂದು ಮುಂದಾದರೆ ಒಂದು ಮೋಸ ಮಾಡುತ್ತಾರೆ ಇಲ್ಲ ಮೋಸ ಹೋಗುತ್ತಾರೆ. ಪ್ರತಿಯೊಂದು ಕಡೆಯೂ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆಯ್ಕೆ ಸರಿಯಾಗಿದ್ದರೆ ಒಳ್ಳೆಯದು. ಬೆಂಗಳೂರಿನಲ್ಲಿ ಮಾತ್ರವೇ ಅಲ್ಲದೆ ಬೇರೆ ಪಟ್ಟಣಗಳಲ್ಲೂ ಸಹ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲಸಕ್ಕೆ ಸೇರಿದ ಒಂದೇ ತಿಂಗಳಿಗೆ ಊಹೆಗೂ ಮೀರಿದಷ್ಟು ಹಣ ಸಂಪಾದಿಸಬಹುದು ಎಂಬ ದುರಾಸೆಗೆ ಬಿದ್ದರೆ ಇಂತಹದ್ದನ್ನೆಲ್ಲ ಅನುಭವಿಸಬೇಕಾಗುತ್ತದೆ. ಕೆಲಸ ಕೊಡುವವರು ಅವರೇ ಹಣ ಕೊಡುತ್ತಾರೆ, ಹಣ ಕೇಳುವವರು ಯಾವತ್ತೂ ಕೆಲಸ ಕೊಡಿಸುವುದಿಲ್ಲ. ಪಟ್ಟಣಗಳಿಗೆ ಕೆಲಸ ಹುಡುಕಿಕೊಂಡು ಬರುವವರು ಇದನ್ನು ಅರಿತರೆ ಉತ್ತಮ. ಯುವ ಪೀಳಿಗೆಯು ಇಂತಹ ನಕಲಿ ಕಂಪನಿಗಳ ಬಲೆಗೆ ಬಿದ್ದು ಮೋಸ ಹೋಗದಿರಲಿ ಎಂಬ ಕಾರಣಕ್ಕಾಗಿ ಈ ವರದಿಯನ್ನು ಮಾಡಿದ್ದೇವೆ. ಯಾವುದೇ ಆದರೂ ಅತಿಬೇಗ ಸಿಗುವುದಿಲ್ಲ ಮೋಸ ಹೋಗುವ ಮುನ್ನ ಎಚ್ಚೆತ್ತುಕೊಳ್ಳಿ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…