ಹೇ ಗುರುವೇ, ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ .
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲಿಂದು,ನೂರಾರು ಶಿಕ್ಷಕರು ತರಗತಿ ತೊರೆದು,ಬಡ್ತಿ ಹೊಂದಿ ನಿರ್ಗಮಿಸುತ್ತಿರುವ ಹಿಂದಿನ DDPI ಹಾಗೂ ಹಾಲಿ ಹೊಸದಾಗಿ ವರ್ಗಾವಣೆಯಾಗಿ ಬಂದಿರುವ DDPI ಇಬ್ಬರಿಗೂ ಸ್ವಾಗತ,ಬೀಳ್ಕೊಡುಗೆಯು ಅದ್ದೂರಿಯಾಗಿ ಈಗ ನಡೆಯುತ್ತಿದೆ,


ಹೇಳೋರಿಲ್ಲ ಕೇಳೋರಿಲ್ಲದಂತಾದ ಶಿಕ್ಷಣ ಇಲಾಖೆ.ಅದೂ ಶಿಕ್ಷಣ ಸಚಿವರ ಜಿಲ್ಲೆಯಲ್ಲಿಯೇ ಹೀಗಾದರೆ.ಬೇರೆ ಜಿಲ್ಲೆಯ ಕಥೆ…..ವಿಧ್ಯಾರ್ಥಿಗಳ ವ್ಯಥೆ ಕೇಳೋರ್ಯಾರು.
ತರಗತಿ ಬಿಟ್ಟು ಈ ಕಾರ್ಯಕ್ರಮಕ್ಕೆ ನೆನ್ನೆಯಿಂದಲೇ ತಯಾರಿ ಮಾಡಿ .ಅಲೆಯುವ ಶಿಕ್ಷಕರ ವರ್ಗ ರೂಪಿಸುತ್ತಿರುವ ಅಧಿಕಾರಿಗಳ ಮೇಲೇಕೆ ಕ್ರಮ ಇಲ್ಲ
ಯಾವ ಸಾಧನೆಗಾಗಿ ಈ ಸ್ವಾಗತ.ಬೀಳ್ಕೊಡುಗೆ.ಅದೂ ಈ ದಿನ ಸುಮಾರು 300 ಶಿಕ್ಷಕರು.ದೂರದ ಪಾವಗಡ.ಶಿರಾ..ಇನ್ನಿತರ ತಾಲ್ಲೂಕಿನಿಂದ ಬೆಳಗ್ಗೆಯಿಂದಲೇ ತಯಾರಿ ಮಾಡಿದ್ದಾರೆ.ತಮ್ಮ ಶಾಲಾ ಮಕ್ಕಳ ಗತಿ ಏನು ಎಂದು ಯೋಚಿಸದೆ..ಬಕೆಟ್ ಸಂಸ್ಕೃತಿ ಬೆಳೆಸುವ ಈ ಪದ್ದತಿ ಸರಿಯೇ.


ದಯಮಾಡಿ ಇಲಾಖೆಯು ಇನ್ನದರೂ ಎಚ್ಚೆತ್ತುಕೊಂಡು ಸಂಬಂಧಿಸಿದ ಅಧಿಕಾರಿ.ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸಬಹುದೇ………

error: Content is protected !!