Latest

36 ವರ್ಷದ ಆಂಟಿ ಮತ್ತು 27 ವರ್ಷದ ವೈದ್ಯ: ಲೈಂಗಿಕ ದೌರ್ಜನ್ಯ, ಒಬ್ಬರಮೇಲೊಬ್ಬರ ಆರೋಪ!

ರಾಮನಗರ: 36 ವರ್ಷದ ಮಹಿಳೆ ಮತ್ತು 27 ವರ್ಷದ ವೈದ್ಯನ ನಡುವೆ ಲೈಂಗಿಕ ದೌರ್ಜನ್ಯ ಆರೋಪ, ಪ್ರಕರಣ ಗಂಭೀರ ತಿರುವು. ರಾಮನಗರದಲ್ಲಿ 36 ವರ್ಷದ ಮಹಿಳೆ ಮತ್ತು 27 ವರ್ಷದ ಯುವ ವೈದ್ಯನ ನಡುವೆ ನಡೆದ ಘಟನೆಯು ವಿವಾದಕ್ಕೆ ಕಾರಣವಾಗಿದೆ. ಮಹಿಳೆ ಯುವ ವೈದ್ಯನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರೆ, ವೈದ್ಯನು ತನ್ನ ವಿರುದ್ಧ ಆಕೆಯೇ ಅಸಭ್ಯವಾಗಿ ವರ್ತಿಸಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯ ಹಿನ್ನೆಲೆ:
ಮಹಿಳೆ, ಇವೆಂಟ್ ಮ್ಯಾನೇಜ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ 9 ಗಂಟೆ ವೇಳೆಗೆ ಸಂಬಂಧಿಕರ ಮನೆಗೆ ಹೋಗಲು ಬಸ್ ನಿರೀಕ್ಷಿಸುತ್ತಿದ್ದರು. ಬಸ್ ಸಿಗದ ಕಾರಣ, 27 ವರ್ಷದ ವೈದ್ಯನನ್ನು ತಡೆದು ಡ್ರಾಪ್ ಕೋರಿದ್ದಾರೆ. ಮಹಿಳೆ ನನಗೆ ಕುಂಬಳಗೋಡು ಬಿಡಿ ಎಂದು ಹೇಳಿದ್ದಾಳೆ. ಈ ವೇಳೆ ಕೆಂಗೇರಿ ಕಡೆ ಹೋಗ್ತಾ ಇದೀರಾ, ಹಾಗಾದ್ರೆ ಕೆಂಗೇರಿಯೇ ಬಿಟ್ಟುಬಿಡಿ ಎಂದು ಮಹಿಳೆ ಹೇಳಿದ್ದಾಳಂತೆ.‌

ಮಧ್ಯದ ಸಮಯದಲ್ಲಿ, ವೈದ್ಯನು ಪಥ ಬದಲಿಸಿ ಕತ್ತಲಿರುವ ಖಾಲಿ ಲೇಔಟ್‌ಗೆ ತೆರಳಿ, ಅಸಭ್ಯವಾಗಿ ವರ್ತಿಸಿದ್ದಾನೆಂದು ಮಹಿಳೆ ಆರೋಪ ಮಾಡಿದ್ದಾರೆ. ವೈದ್ಯನು ಡ್ರೆಸ್ ತೆಗೆಯಲು ಹೇಳಿದ್ದು, ತನ್ನ ಪ್ಯಾಂಟ್ ಬಿಚ್ಚಿ ಆಕೆಯೊಂದಿಗೆ ಅನಾಚಾರಕ್ಕೆ ಮುಂದಾಗಿದ್ದಾನೆ. ಈ ಸಂದರ್ಭ ಮಹಿಳೆ ಜೋರಾಗಿ ಕೂಗಿ, ಸ್ಥಳದಿಂದ ಓಡಿಹೋಗಿ ಮತ್ತೊಬ್ಬ ಬೈಕ್ ಸವಾರನ ನೆರವಿನಿಂದ ಕುಂಬಳಗೋಡಿಗೆ ತಲುಪಿದ್ದಾರೆ.

ವೈದ್ಯನ ಪ್ರತಿಸ್ಪಂದನೆ:
ಆರೋಪವನ್ನು ನಿರಾಕರಿಸಿದ ವೈದ್ಯನು, ಮಹಿಳೆಯೇ ನನ್ನ ಮೇಲೆ ಅಸಭ್ಯವಾಗಿ ವರ್ತಿಸಿದ್ದಾಳೆ ಎಂದು ಹೇಳಿದ್ದು, “ನಾನು ಆಕೆಗೆ ಕೇವಲ ಸಹಾಯ ಮಾಡಲು ಮುಂದಾಗಿದ್ದೆ. ನನ್ನೊಡನೆ ಇರುವ ವೇಳೆ ಆಕೆಯೇ ನನ್ನ ಮರ್ಮಾಂಗಕ್ಕೆ ಕೈ ಹಾಕಿದ್ದಾರೆ. ನಾನು ಆ ತರಹ ಮಾಡುವ ವ್ಯಕ್ತಿಯಲ್ಲ,” ಎಂದಿದ್ದಾರೆ.

ಪೊಲೀಸರ ತನಿಖೆ:
ಈ ಘಟನೆಯು ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇಬ್ಬರಲ್ಲೂ ಪರಸ್ಪರ ವಿರುದ್ಧವಾದ ಆರೋಪಗಳನ್ನು ಮಾಡಿರುವ ಕಾರಣ, ಸತ್ಯಾಂಶವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಪ್ರಕರಣವು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದ್ದು, ಪುರುಷರ ಮತ್ತು ಮಹಿಳೆಯರ ಭದ್ರತೆಯ ಕುರಿತು ಮಹತ್ವದ ಪ್ರಶ್ನೆಗಳನ್ನು ಎಬ್ಬಿಸಿದೆ.

kiran

Recent Posts

ಪತ್ನಿಯ ಎದುರೇ ಪ್ರೇಯಸಿ ಜೊತೆ ಲೈಂಗಿಕ ಕ್ರಿಯೆ; ಜೀವಂತವಾಗಿ ಸುಟ್ಟು ಹಾಕಿದರು!

ಉತ್ತರಪ್ರದೇಶ: ಪತ್ನಿಯ ಎದುರೇ ಪ್ರೇಯಸಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಪತಿ ಜೀವಂತ ಸುಟ್ಟು ಹತ್ಯೆ. ಉತ್ತರಪ್ರದೇಶದ ಇಟಾವಾದಲ್ಲಿ ರಾಘವೇಂದ್ರ…

51 minutes ago

ಬಳ್ಳಾರಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ

ಬಳ್ಳಾರಿ ಜಿಲ್ಲೆಯ ತೋರಣಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಯೊಬ್ಬ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಹಿರಂಗವಾಗಿದೆ.…

1 hour ago

500 ಕೋಟಿ ರೂ. ಆಸ್ತಿ ಹೊಂದಿರುವ ಸಾರಿಗೆ ಇಲಾಖೆಯ ಮಾಜಿ ಕಾನ್‌ಸ್ಟೇಬಲ್ ಎಸ್ಕೇಪ್

ಮಧ್ಯಪ್ರದೇಶದ ಸಾರಿಗೆ ಇಲಾಖೆಯ ಮಾಜಿ ಕಾನ್‌ಸ್ಟೇಬಲ್ ಸೌರಭ್ ಶರ್ಮಾ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ನಂತರ ಅವರು ನಾಪತ್ತೆಯಾಗಿದ್ದಾರೆ. ಈ…

1 hour ago

ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಆರ್‌.ಪಿ.ಎಫ್: ವಿಡಿಯೋ ವೈರಲ್!

ಕಾನ್ಪುರ ಸೆಂಟ್ರಲ್ ನಿಲ್ದಾಣದಲ್ಲಿ RPF ಪೊಲೀಸರ ತ್ವರಿತ ಕ್ರಮದಿಂದ ಮಹಿಳಾ ಪ್ರಯಾಣಿಕರೊಬ್ಬರ ಜೀವ ರಕ್ಷಣೆಯಾಗಿದೆ. ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ…

2 hours ago

ಜೂಜಿನ ಚಟಕೆ ಬಿದ್ದು ಕಳ್ಳತನ: ಟೆಕ್ ಮೂರ್ತಿ ಮತ್ತೆ ಪೊಲೀಸರ ಅತಿಥಿಯಾದ.!

ಜೂಜಿನ ಚಟಕೆ ಬಿದ್ದು ಟೆಕ್ ಉದ್ಯೋಗಿ ಒಬ್ಬನು 18 ಲಕ್ಷ ಮೌಲ್ಯದ ಚಿನ್ನ ಕಳ್ಳತನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.…

4 hours ago

ಹುಬ್ಬಳ್ಳಿಯಲ್ಲಿ ಕರುವಿನ ಮೇಲೆ ಕ್ರೌರ್ಯ: ಘಟನೆಗೆ ಸಾರ್ವಜನಿಕರು ಆಕ್ರೋಶ.

ಬೆಂಗಳೂರು ಚಾಮರಾಜಪೇಟೆಯಲ್ಲಿ ಹಸುವಿನ ಮೇಲೆ ನಡೆದ ಕ್ರೌರ್ಯದ ಘಟನೆ ಮಾಸುವ ಮೊದಲು, ಹುಬ್ಬಳ್ಳಿಯಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ.…

5 hours ago