ಕೊಟ್ಟೂರು:- ಲಾರಿ ಚಾಲಕನ ನಿರ್ಲಕ್ಷ್ಯತನದ ಹಾಗೂ ಅತೀ ವೇಗದಿಂದ 4 ವರ್ಷದ ವರ್ಷಿಣಿ ಎಂಬ ಪುಟ್ಟ ಬಾಲಕಿ ಲಾರಿ ಗಾಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕೊಟ್ಟೂರು ತಾಲೂಕಿನ ಕೆ ಅಯ್ಯನಹಳ್ಳಿ ಗ್ರಾಮದಲ್ಲಿ ವರ್ಷಿಣಿ ತಾಯಿ ಮೂಗಮ್ಮಳು ಸೋಮವಾರ ಮಧ್ಯಾಹ್ನ 1 ಘಂಟೆ ಸುಮಾರಿಗೆ ಕೊಟ್ಟೂರಿನ ಕಡೆಗೆ ಹೋಗಲು ಅಯ್ಯನಹಳ್ಳಿ ಬಸ್ ಸ್ಟಾಪ್ ಹತ್ತಿರ ನಿಂತುಕೊಂಡ ಸಂದರ್ಭದಲ್ಲಿ ಕೊಟ್ಟೂರು ಪಟ್ಟಣ ಕಡೆಯಿಂದ ಹರಪನಹಳ್ಳಿ ಕಡೆಗೆ ಹೋಗುವ ಕೆ.ಎ36.ಬಿ 0695 ನಂಬರಿನ ಲಾರಿಯು ಒಣ ಮೆಣಸಿನಕಾಯಿ ಲೋಡ್ ತೆಗೆದುಕೊಂಡು ಹೋಗುವಾಗ ಚಾಲಕನ ನಿರ್ಲಕ್ಷ್ಯತನ ಹಾಗೂ ಅತೀ ವೇಗದಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿದ್ದ ನನ್ನ ಮಗಳು 4 ವರ್ಷದ ಪುಟ್ಟ ಬಾಲಕಿ ವರ್ಷಿಣಿಗೆ ಲಾರಿ ಡಿಕ್ಕಿಪಡಿಸಿ ಲಾರಿಯ ಮುಂದಿನ ಎಡಬಾಗದ ಟೈರ್ ಆಕೆಯ ಮೇಲೆ ಹತ್ತಿಸಿದನು ಬಾಲಕಿಗೆ ಹೊಟ್ಟೆ ಮೇಲೆ ಗಾಲಿ ಹತ್ತಿರುವುದರಿಂದ ದೇಹದ ಮುಖ್ಯ ಅಂಗಗಳು ಮುರಿದು ಬಾಲಕಿ ಮೃತಪಟ್ಟಿದ್ದಾಳೆ ಚಾಲಕನು ಮುಂದೆ ಹೋಗಿ ಲಾರಿ ಬಿಟ್ಟು ಪರಾರಿಯಾದನು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೊಟ್ಟೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವರದಿ: ಮಣಿಕಂಠ. ಬಿ

error: Content is protected !!