ಯಲ್ಲಾಪುರ ತಾಲೂಕಿನ ಕಾಳಮ್ಮ ನಗರದಲ್ಲಿ ಚೇತನ್ ಭಟ್ ಅವರಿಗೆ ಸೇರಿದ 4 ಟಿಪ್ಪರ್ ವಾಹನ ನಿಲ್ಲಿಸಿದ್ದರು, ಸರಿಯಾದ ಸಮಯ ನೋಡಿ ಯಾರೋ ಕಳ್ಳರು 4 ಟಿಪ್ಪರಿನ ಬ್ಯಾಟರಿ ಮತ್ತು ಹೈಡ್ರಾಲಿಕ್ ಜಾಕ್ ಕಳವು ಮಾಡಿದ್ದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು ,ಈ ಪ್ರಕರಣದ ಕೈಗೆತ್ತಿಕೊಂಡ ಪೊಲೀಸರು ದೂರಿನ ಮೇರೆಗೆ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗಿದ್ದು ಕಳ್ಳರು ಜೈಲು ಪಾಲಾಗಿದ್ದಾರೆ, 1)ಆರೋಪಿತರದ ಸುಬಾನಿ ಹಸನಸಾಬ ಜಂಗಲೇ ಹಳಿಯಾಳ ಮೂಲದವನು, ಹಾಗೂ ಅಬ್ದುಲ್ ಹಮಿದ ಮುಜಿದಸಬಾ ಮಂಚಿಕೇರಿ ಡ್ರೈವರ್ ಕೆಲಸ.
ಇಬ್ಬರು ಆರೋಪಿತರನ್ನು ಪತ್ತೆ ಮಾಡಿದ್ದು ಆರೋಪಿತರು 40 ಸಾವಿರ ಮೌಲ್ಯದ ಬ್ಯಾಟರಿ ಹಾಗೂ ಹೈಡ್ರಾಲಿಕ್ ಜಾಕ್ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದು ಹಾಗೂ ಕಳ್ಳತನಕ್ಕೆ ಬಳಸಿದ ಮಹೀಂದ್ರ ಪಿಕಪ್ ವಾಹನವನ್ನು ವಶಕ್ಕೆ ಪಡೆದು ಆರೋಪಿತರಿಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸಿಪಿಐ ರಮೇಶ ಹನಪುರ ಇವರ ನೇತೃತ್ವದಲ್ಲಿ ನಡೆದ ಕಾರ್ಯಾಚಣೆ. ಪೀ.ಎಸ್.ಐ ರವರಾದ ನಿರಂಜನ ಹೆಗಡೆ ಹಾಗೂ ಪೀ.ಎಸ್.ಐ ಸಿದ್ದಪ್ಪ ಗುಡಿ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ವರದಿ: ಶ್ರೀಪಾದ್ ಎಸ್ ಎಚ್