
ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಮಲ್ಖರೋಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬಡೆ ರಾವೇಲಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ಪುತ್ತಿದಂತೆ ಹೊರಬಿದ್ದಿದೆ. ಏಪ್ರಿಲ್ 8ರ ರಾತ್ರಿ, 21 ವರ್ಷದ ಯುವಕ ರಾಹುಲ್ ಅಂಚಲ್ ಅಪ್ರಾಪ್ತ ಬಾಲಕಿಯೊಬ್ಬಳನ್ನು ಭೇಟಿಯಾಗಲು ಬಂದ ಸಂದರ್ಭದಲ್ಲಿ, ಬಾಲಕಿಯ ಕುಟುಂಬಸ್ಥರು ಹಾಗೂ ಸ್ಥಳೀಯರು ಆತನನ್ನು ಹಿಡಿದು ನಿರ್ದಯವಾಗಿ ಹಲ್ಲೆ ಮಾಡಿದ್ದಾರೆ.
ದಾಬ್ರಾ ಪ್ರದೇಶದ ನಿವಾಸಿಯಾಗಿರುವ ರಾಹುಲ್ ಪರಿಶಿಷ್ಟ ಜಾತಿಯ ಸತ್ನಾಮಿ ಸಮುದಾಯಕ್ಕೆ ಸೇರಿದ್ದು, ಇತರ ಹಿಂದುಳಿದ ವರ್ಗದ ಬಾಲಕಿಯನ್ನು ಭೇಟಿ ಮಾಡಲು ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಬಾಲಕಿಯ ಸಂಬಂಧಿಕರು ಆತನನ್ನು ಹಿಡಿದುಕೊಂಡು, ಚಪ್ಪಲಿ, ಕೇಬಲ್ ಹಾಗೂ ಪೈಪ್‌ಗಳಿಂದ ಕ್ರೂರವಾಗಿ ಹೊಡೆದಿದ್ದಾರೆ.
ಮರುದಿನ ಬೆಳಿಗ್ಗೆ, ಮತ್ತಷ್ಟು ಘೋರ ಘಟನೆ ನಡೆದಿದ್ದು, ಯುವಕನನ್ನು ಗ್ರಾಮದ ಮಧ್ಯೆ ರಸ್ತೆ ಮೇಲೆ ವಿವ್ರಸ್ತ್ರಗೊಳಿಸಿ, ಮರವೊಂದರ ಅಡಿಯಲ್ಲಿ ಕುಳಿರಿಸಿ ಹಗ್ಗದಿಂದ ಸಹ ಹಲ್ಲೆ ನಡೆಸಲಾಗಿದೆ. ಈ ಘಟನೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.
ಘಟನೆಯ ನಂತರ ಗಂಭೀರವಾಗಿ ಗಾಯಗೊಂಡ ಯುವಕನನ್ನು ತಕ್ಷಣವೇ ರಾಯಗಢ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆತನ ಚಿಕಿತ್ಸೆ ನಡೆಯುತ್ತಿದೆ. ಇನ್ನು ಘಟನೆ ಸಂಬಂಧವಾಗಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದು, ಐದುನಲ್ಲು ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಘಟನೆ ಮೇಲ್ನೋಟಕ್ಕೆ ಆಪರಾಧ ಪ್ರಕರಣವಲ್ಲದೆ ಸಾಮಾಜಿಕ ವರ್ಣಮಟ್ಟದ ಅಸಮತೋಲನ ಮತ್ತು ಪ್ರಚಂಡ ಕ್ರೌರ್ಯದ ಸ್ಪಷ್ಟ ಚಿತ್ರಣ ನೀಡುತ್ತಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದೆ.