ಧಾರವಾಡ: ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಗಂಭ್ಯಾಪುರ ಗ್ರಾಮದ ಮಕ್ಕಳೊಬ್ಬರು ಆಟವಾಡುತ್ತಿದ್ದಾಗ ವಿಷಯುಕ್ತ ಹಣ್ಣು ಸೇವಿಸಿದ ಪರಿಣಾಮ ಅಸ್ವಸ್ಥಗೊಂಡು, ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಿನ್ನೆ ಸಾಯಂಕಾಲ ನಡೆದಿದೆ.
ಗ್ರಾಮದ ಏಳು ಬಾಲಕರು ಹಾಗೂ ಮೂವರು ಬಾಲಕಿಯರು ಮುಂಜಾನೆ ಆಟವಾಡುತ್ತಿದ್ದ ವೇಳೆ ಔಡಲಕಾಯಿ (ವಿಷಯುಕ್ತ ಹಣ್ಣು) ತಿಂದಿದ್ದಾರೆ. ತಕ್ಷಣವೇ ಅವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿದವು, ವಾಂತಿ ಹಾಗೂ ಅನ್ಯ ಲಕ್ಷಣಗಳು ಕಾಣಿಸಿಕೊಂಡವು. ಈ ಬಗ್ಗೆ ಮಕ್ಕಳಿಂದ ಮಾಹಿತಿಯನ್ನು ಪಡೆದು, ತಮ್ಮ ಪಾಲಕರು ತಕ್ಷಣವೇ ಏಳು ಮಕ್ಕಳನ್ನು ಪ್ರಥಮ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ವಿಷಯ ತಿಳಿದು, ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ಕುರಿತು ವಿಚಾರಣೆ ನಡೆಸಿದರು. ವೈದ್ಯರು ನೀಡಿದ ಮಾಹಿತಿ ಪ್ರಕಾರ, ಎಲ್ಲಾ 7 ಮಕ್ಕಳೂ ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಚಿಕಿತ್ಸೆಯೊಂದಿಗೆ ಯಾವುದೇ ಗಂಭೀರ ಹಾನಿಯು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ವರದಿ: ಶಿವರಾಜ್ ಪಿ.ಆರ್.