ಕುಂದಗೋಳ; ತಾಲೂಕಿನ ಯರೇನಾರಾಯಣಪೂರ ಗ್ರಾಮದದಿಂದ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮುಗಿದು ಕೆಲವು ತಿಂಗಳ ಕಳೆಯುವಷ್ಟರಲ್ಲಿ ಡಾಂಬರು ಕಿತ್ತು ಹೋಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 75 ಲಕ್ಷ ರೂಪಾಯಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ಕೆಲವು ತಿಂಗಳು ಕಳೆಯುವಷ್ಟರಲ್ಲಿ ಕೆಲವಡೆ ರಸ್ತೆ ಕಿತ್ತೂ ಹೋಗಿದೆ. ಹಾಗಾದರೆ ಕಮಿಶನ್ ದಂದೇನಾ? ಅಥವಾ ಹಣ ಕೊಳ್ಳೆ ಹೊಡೆಯಲೂ ದಾರೀನಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನೇಮ್ ಆಫ್ ವರ್ಕ್ ನಲ್ಲಿ ಯರೇನಾರಾಯಣಪೂರ ಗ್ರಾಮದಿಂದ ರಾಜ್ಯ ಹೆದ್ದಾರಿ-137 ಕೂಡು ರಸ್ತೆಗೆ ಅಲ್ಲಿವರಿಗೊ ಡಾಂಬರೀಕರಣ ಮಾಡಬೇಕು ಆದರೆ ಹನುಮಂತಗೌಡ್ರ ಟೋಪನಗೌಡ್ರ ಎಂಬಾತರ ಮನೆಯವರಿಗೆ ಮಾತ್ರ ಡಾಂಬರೀಕರಣ ಮಾಡಲಾಗಿದೆ. ಅಂದಹಾಗೆ ಹಣ ಕೊಳ್ಳಿಹೊಡೆಯಲು ಪ್ರಯತ್ನಕ್ಕೆ ಮುಂದಾದ್ರಾ ಅನ್ನುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದಲ್ಲದೆ ಕಳಪೆ ಮಟ್ಟದ ರಸ್ತೆ ಅಭಿವೃದ್ಧಿ ಪಡಿಸಿ ಕೆಲವು ದಿನಗಳ ಬಳಿಕ ಮತ್ತೆ ಪ್ಯಾಚ್ ವರ್ಕ ಸಹ ಮಾಡಿದ್ದಾರೆ. ಆದರೂ ರಸ್ತೆ ಅಭಿವೃದ್ಧಿ ಹೇಳಿ ಕೊಳ್ಳುವ ಅಂತ ಕೆಲಸ ಮಾಡಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ದೂರಿದರು.
ಸರಕಾರಗಳು ಗ್ರಾಮೀಣ ಜನರಿಗೆ ಸುಗಮ ಸಂಚಾರಕ್ಕೆ ಗ್ರಾಮೀಣ ಪಥಗಳನ್ನು ನಿರ್ಮಾಣ ಮಾಡಲು ಲಕ್ಷ ಲಕ್ಷ ಹಣ ಬಿಡುಗಡೆಗೊಳಿಸುತ್ತೆ. ಆದರೆ ಲೂಟಿ ಹೊಡೆಯುವ ಖದೀಮರು ಮಾತ್ರ ಹಣ ಕಬಳಿಸಲು ಮುಂದಾಗುತ್ತಾರೆ. ”ಹಣವನ್ನು ಕಂಡರೆ ಹೆಣವು ಬಾಯಿ ಬಿಡುತ್ತದೆ” ಗಾದೆಗೆ ಸಮಾನವಾಗಿ ನಡೆದುಕೊಳ್ಳುತ್ತಾರೆ ಅಂದರೆ ಇವರುಗಳು ಎಂತ ನಾಲಾಯಕ್ ಇರಬೇಕು ಅಂತ ನೋಡಿ.
ಒಟ್ಟಾರೆ ಅಭಿವೃದ್ಧಿ ಹೊಂದಿದ ರಸ್ತೆ ಡಾಂಬರು ಕಿತ್ತು ತೆಗ್ಗು ಬಿಳ್ಳಲು ಪ್ರಾರಂಭಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದಲ್ಲದೆ ನೆಮ್ ಆಪ್ ವರ್ಕ್ ನಲ್ಲಿ ರಾಜ್ಯ ಹೆದ್ದಾರಿವರಿಗೊ ರಸ್ತೆ ಅಭಿವೃದ್ಧಿ ಪಡಿಸಿಬೇಕು ಆದರೆ ಇವರುಗಳು ಈ ಕಾರ್ಯಕ್ಕೆ ಮುಂದಾಗಿಲ್ಲ ಹಾಗಾಗಿ ಅಧಿಕಾರಿಗಳು ಸ್ಥಳೀಯ ಶಾಸಕರು ಸ್ಥಳಕ್ಕೆ ಬೇಟೆ ನೀಡಿ ಪರಿಶೀಲಿಸಿ ಗುತ್ತಿಗೆದಾರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹವಾಗಿದೆ.
ವರದಿ; ಶಾನು ಯಲಿಗಾರ
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…