ಕುಂದಗೋಳ; ಪಟ್ಟಣದ ಜೆ. ಎಮ್. ಎಫ್. ಸಿ ನ್ಯಾಯಾಲಯ ಪೀಠದಲ್ಲಿ ಮಾರ್ಚ್ 16 ರಂದು ಜರುಗಿದ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ಒಟ್ಟು 92 ರಾಜಿ ಸಂಧಾನ ಪ್ರಕರಣಗಳನ್ನು ಎರಡು ನ್ಯಾಯಾಲಯದಲ್ಲಿ ಒಟ್ಟು ರೂ 3,888,248 ಮೊತ್ತಕ್ಕೆ ಇತ್ಯರ್ಥಪಡಿಸಿಲಾಯಿತು.

ಕುಂದಗೋಳ ಪಟ್ಟಣದ ಜೆ. ಎಮ್. ಎಫ್. ಸಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಚಕ್ ಬೌನ್ಸ್ 4, ವೈವಾಹಿಕ 4, ಆಸ್ತಿ 13, ಒಟ್ಟು ಪ್ರಕರಣಗಳು 21 ರಾಜಿಯಾಗಿದ್ದು, ರಾಜಿ ಮೊತ್ತ 17,55,437 ಪರಿಹಾರ ಹಣವನ್ನು ವಸೂಲಿ ಮಾಡಲಾಗಿದೆ. ಅದರಂತೆ ದಿವಾಣಿ ನ್ಯಾಯಾಲಯದಲ್ಲಿ ಆಸ್ತಿ ಪ್ರಕರಣ 31, ಅಂತಿಮ ಡಿಕ್ರಿ 1, ಅಮಲ್ಮಾರಿ 1, ಚಕ್ ಬೌನ್ಸ್ 14, ಕಂಪೋಡೆಂಟ್ 4, ಲಘು ಪ್ರಕರಣ 12, ಕ್ರಿಮಿನಲ್ ಮಿಸಲಾನಿಸ್ 8 ಒಟ್ಟು 71 ಪ್ರಕರಣಗಳು ರಾಜಿಯಾಗಿದ್ದು, ರಾಜಿ ಸಂದಾನದಲ್ಲಿ ಮೊತ್ತ 21,32,811 ಪರಿಹಾರ ಒದಗಿಸಲಾಗಿದೆ.

ಇನ್ನೂ ದಾಂಪತ್ಯದಲ್ಲಿ ಜೀವನ ನಡೆಸಬೇಕಾದ ಕುಟುಂಬದಲ್ಲಿನ ಮನಸ್ತಾಪದಿಂದ ದೂರವಾಗಿ ವಿವಾಹ ವಿಚ್ಛೇದನ ಬಯಸಿ ತಾಲೂಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಜೋಡಿಗಳು ಮೇಘಾ ಲೋಕ ಆದಾಲತ್ ನ ರಾಜಿ ಸಂಧಾನ ಮೂಲಕ ಒಂದಾದರು. ನ್ಯಾಯಾಲಯದ ಆವರಣದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡರು ಮರಳಿ ನಿಮ್ಮ ದಾಂಪತ್ಯ ಜೀವನ ಸುಖಕರವಾಗಲಿ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯದೀಶರು ಪಿ. ಜೆ ಪರಮೇಶ್ವರ ಶುಭ ಹಾರೈಸಿದರು. ಈ ಲೋಕ ಆದಾಲತ್ ನಲ್ಲಿ ಹಿರಿಯ ದಿವಾಣಿ ನ್ಯಾಯಾಲಯ, ದಿವಾಣಿ ನ್ಯಾಯಾಲಯದಲ್ಲಿ ಒಟ್ಟು 92 ಪ್ರಕರಣಗಳು ಇತ್ಯರ್ಥಗೊಂಡಿವೆ. ನ್ಯಾಯಾಧೀಶರಾದ ಪಿ. ಜೆ. ಪರಮೇಶ್ವರ, ಶ್ರೀಮತಿ ಗಾಯತ್ರೀ ಮೇಡಂ ರಾಷ್ಟ್ರೀಯ ಲೋಕ ಆದಾಲತ್ ಯಶಸ್ವಿಗೊಳಿಸಿದರು.

ವರದಿ: ಶಾನು ಯಲಿಗಾರ

error: Content is protected !!