ಕನ್ನಡ ಭಾಷೆಯಲ್ಲಿ ಮಾತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಒಳ್ಳೆ ಪ್ರದರ್ಶನ ಕಾಣುತ್ತಿದ್ದಂತಹ ಕಾಂತಾರ ಸಿನಿಮಾವನ್ನು ಬೇರೆ ಭಾಷೆಗಳಲ್ಲಿ ಸಹ ಬಿಡುಗಡೆ ಮಾಡುವಂತೆ ಪರಭಾಷೆಯ ಸಿನಿ ಪ್ರೇಮಿಗಳು ಕೇಳಿಕೊಂಡ ಕಾರಣ ಕಾಂತರಾ ಚಿತ್ರ ತಂಡವು ಪರಭಾಷೆಗಳಲು ಸಹ ಚಿತ್ರವನ್ನು ಬಿಡುಗಡೆಗೆ ಸಿದ್ದ ಮಾಡಿದೆ. ಇಂದು ಪರಭಾಷೆಯ ಕಾಂತರಾ ಚಿತ್ರದ ಟ್ರೈಲರ್ ಗಳನ್ನು ಬಿಡುಗಡೆ ಮಾಡಿದ್ದ ಹೊಂಬಾಳೆ ಫಿಲಂಸ್ 14ನೇ ತಾರೀಕು ಹಿಂದಿ ಆವೃತ್ತಿ ಹಾಗೂ 15ನೇ ತಾರೀಕು ತೆಲುಗು ಆವೃತ್ತಿ ಅನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.