ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಿಂದ ನಾಗರಹಳ್ಳಿಗೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಹಣಗೆಟ್ಟಿದ್ದು ಮಳೆಯಿಂದಾಗಿ ವಾಹನ ಸಮಾರರು ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗೆ ಹಾಕಿರುವಂತಹ ಡಾಂಬರೀಕರಣ ಸಂಪೂರ್ಣವಾಗಿ ಕಿತ್ತಿದ್ದು ರಸ್ತೆ ಗುಂಡಿ ಬಿದ್ದ ಜಾಗದಲ್ಲೆಲ್ಲಾ ನೀರು ತುಂಬಿಕೊಂಡಿದೆ. ರಸ್ತೆಯನ್ನು ಸರಿಪಡಿಸುವ ವಿಚಾರದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದು ಜನರು ಯಾವುದೇ ಬೇರೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಅದೇ ರಸ್ತೆಯಲ್ಲಿ ಭಯದಿಂದ ಓಡಾಡುತ್ತಿದ್ದಾರೆ.