ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ದಿನಾಂಕ 09/10/2022 ರಂದು ಶ್ರೀ ಮರಿಯಮ್ಮ ದೇವಿ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿ ಜೀರ್ಣೋದ್ದಾರ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಅವರು ಮಾತನಾಡಿದರು.
ಅವರು ಈ ಸಂದರ್ಭದಲ್ಲಿ ನನ್ನ ಕ್ಷೇತ್ರದ ಮುಂಡಗೋಡ ತಾಲೂಕಿನಲ್ಲಿ ಈಗಾಗಲೇ ಸುಮಾರು 120 ಕೋಟಿ ರೂಪಾಯಿ ಅನುದಾನವನ್ನು ದೇವಸ್ಥಾನಗಳಿಗೆ ಬಿಡುಗಡೆ ಮಾಡಿದ್ದೇನೆ.ಇನ್ನೂ 35 ಕೋಟಿಗೂ ಅಧಿಕ ಹಣವು ಬಿಡುಗಡೆಯಾಗುವ ಹಂತದಲ್ಲಿ ಇದೆ ಎಂದು ಅವರು ತಿಳಿಸಿದರು.ಇಂತಹ ಸತ್ಕಾರ್ಯಗಳಿಗೆ ಅನುದಾನವನ್ನು ಒದಗಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಅವರು ಹೇಳಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಲ್ ಟಿ ಪಾಟೀಲ್, ನಿಕಟಪೂರ್ವ ಬಿಜೆಪಿ ಮಂಡಲ ಅಧ್ಯಕ್ಷರಾದ ಜಿ ಎಸ್ ಕಾತೂರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ನಾಗಭೂಷಣ ಹಾವಣಗಿ, ರವಿಗೌಡಾ ಪಾಟೀಲ್,ಕೆ ಸಿ ಗಲಬಿ, ಲಕ್ಷ್ಮಣ ಬನ್ಸೋಡೆ, ಗಣಪತಿ ಕೀರ್ತೆಪ್ಪನವರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಕ್ಕಮ್ಮ ನಿಂಬಾಯಿ,ಕಮಲಾ ಹಂಚಿನಮನಿ, ಬಾಬುರಾಯ ಲಾಡನವರ, ಸಣ್ಣಪ್ಪ ಕಾಶಿಬಾಯಿ ಹಾಗೂ ಊರಿನ ನಾಗರಿಕರು,ಮುಂತಾದವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಹರಿಜನ.