ಕಾಸರಗೂಡು ಜಿಲ್ಲೆಯ ಕುಂಬ್ಳೆಯ ಅನಂತಪುರದ ಶ್ರೀ ಅನಂತ ಪದ್ಮನಾಭ ದೇಗುಲದ ನೀರಿನ ಕೊಳದಲ್ಲಿದ್ದ ದೈವಿಸ್ವರೂಪಿ ಮೊಸಳೆ ” ಬಬಿಯಾ” ನಿನ್ನೆ ತಡರಾತ್ರಿ ದೇವೈಕ್ಯವಾಯಿತು.. ಸುಮಾರು 70. ವರ್ಷ ವಯಸ್ಸಿನ ಈ ಬಬಿಯಾ ಮೊಸಳೆ ಸಂಪೂರ್ಣ ಸಸ್ಯಹಾರಿಯಾಗಿದ್ದು ಕೇವಲ ದೇವಾಲಯದ ಪ್ರಸಾದ ಮಾತ್ರ ಸ್ವಿಕರಿಸುತ್ತಿತ್ತು. ಎಂದು ದೇವಾಲಯದ ಮೂಲಗಳಿಂದ ತಿಳಿದುಬಂದಿದೆ . ಈ ಬಬಿಯಾಗೆ ದೇವಾಲಯದ ವತಿಯಿಂದ ಅಂತ್ಯಸಂಸ್ಕಾರ ಮಾಡಲಾಯಿತು .ಅದಕ್ಕೆ ವೇದ _ ಉಪನಿಷತ್ತು ಗಳಲ್ಲಿ ಮಹಾತ್ಮರು ಹೇಳಿದ್ದು ಜ್ಞಾನಿಗಳಿದ್ದಲ್ಲಿ ಅಹಂಕಾರ , ಅಜ್ಞಾನ, ದುರಹಂಕಾರ , ಕ್ರೂರತ್ವ ,ಇರುವುದಿಲ್ಲ.ಅಂತಾ ಬಹುಶಃ ಈ ಒಂದು ವಿಸ್ಮಯಕಾರಿ ಚಮತ್ಕಾರ ನೊಡಿದರೆ ಅದು ಸತ್ಯ ಅಂತ ಅನಿಸುತ್ತದೆ. ಜನ್ಮತಃ ಮಾಂಸ ಹಾರಿಯಾಗಿದ್ದರು ಸಸ್ಯಹಾರಿಯಾಗಿ 70. ವರ್ಷ ದೈವಿ ಸ್ವರೂಪ ಪಡೆದಿದ್ದು ನಿಜಕ್ಕೂ ಇದೊಂದು ಅಪರೂಪವೇ ಸರಿ. ವರದಿ : ಚರಂತಯ್ಯ ಹಿರೇಮಠ.