ಕೆಲವು ಸೋಂಬೇರಿ ಅಧಿಕಾರಿಗಳು ತಮ್ಮ ಮನೆಗಳನ್ನು ಮಾತ್ರ ಸ್ವಚ್ಛವಾಗಿ ಕಾಪಾಡಿಕೊಳ್ಳುತ್ತಾರೆ ಆದರೆ ಸರ್ಕಾರಿ ಕಚೇರಿಗಳನ್ನು ಮಾತ್ರ ನೋಡಬಾರದ ಸ್ಥಿತಿಯಲ್ಲಿ ಇಟ್ಟುಕೊಂಡಿರುತ್ತಾರೆ. ತುಮಕೂರಿನ ಜಿಲ್ಲಾಧಿಕಾರಿ ಮತ್ತು ತಹಸಿಲ್ದಾರ್ ಕಚೇರಿ ಮುಂಭಾಗದಲ್ಲಿರುವ ಸಕಾಲ/ಭೂಮಿ ಕೇಂದ್ರದ ಕಚೇರಿಯ ಮೇಲ್ಭಾಗದಲ್ಲಿ ಸಂಪೂರ್ಣವಾಗಿ ಗಿಡಗಳು ಬೆಳೆದು ನಿಂತಿದ್ದು ಇದನ್ನು ಸ್ವಚ್ಛಗೊಳಿಸುವುದರ ಬಗ್ಗೆ ಯಾವೊಬ್ಬ ಅಧಿಕಾರಿಯ ಗಮನಹರಿಸಿರುವುದಿಲ್ಲ. ಕಟ್ಟಡದ ಮೇಲೆ ಗಿಡಮರಗಳು ಬೆಳೆದು ನಿಂತರೆ ಕಟ್ಟಡ ಶೀಥಿಲಗೊಳ್ಳುತ್ತದೆ ಹಾಗೂ ಅದರ ಆಯಸ್ಸು ಸಹ ಕಡಿಮೆಯಾಗುತ್ತದೆ ಇದು ಸರ್ಕಾರಿ ಕಚೇರಿಯಾದ ಕಾರಣ ಯಾರೊಬ್ಬರೂ ಇತ್ತ ಗಮನ ಹರಿಸದೆ ಸೋಂಬೇರಿಗಳಂತೆ ವರ್ತಿಸುತ್ತಿದ್ದಾರೆ. ಈ ಕಚೇರಿಯ ಮುಖ್ಯಸ್ಥ ನರಸಿಂಹರಾಜು ಜಿಲ್ಲಾಧ್ಯಕ್ಷ ಜಿಲ್ಲಾ ಸರಕಾರಿ ನೌಕರರ ಸಂಘ. ಈತನು ಇರುವಂತಹ ಕಚೇರಿಯ ಪರಿಸ್ಥಿತಿಯೇ ಹೀಗಿದ್ದ ಮೇಲೆ ಉಳಿದ ಸರ್ಕಾರಿ ನೌಕರರ ಕಚೇರಿಗಳ ಪರಿಸ್ಥಿತಿ ಹೇಗಿರಬಹುದು. ಇವನ ಕಚೇರಿಯನ್ನೇ ಸರಿಯಾಗಿ ಇಟ್ಟುಕೊಳ್ಳದವನು ಜಿಲ್ಲಾಧ್ಯಕ್ಷನಾಗಿ ಸರ್ಕಾರಿ ನೌಕರರಿಗೆ ಯಾವ ನೀತಿ ಪಾಠ ಮಾಡುತ್ತಾನೋ?
ಜಿಲ್ಲಾಧಿಕಾರಿಗಳ ಕಚೇರಿಯ ಬಾಗಿಲಲ್ಲಿ ನಿಂತು ನೋಡಿದರೆ ಈ ಕಚೇರಿಯ ಮೇಲೆ ಬೆಳೆದಿರುವ ಗಿಡಗಳು ಸ್ಪಷ್ಟವಾಗಿ ಕಾಣುತ್ತವೆ ಆದರೂ ಸಹ ಜಿಲ್ಲಾಧಿಕಾರಿಗಳು ಇದನ್ನು ಸರಿಪಡಿಸಲು ಮುಂದಾಗದಿರಲು ಕಾರಣವೇನು? ಜಿಲ್ಲಾಧಿಕಾರಿಗಳು ಸಹ ಸರ್ಕಾರಿ ಕಚೇರಿ ಅಲ್ಲವಾ ಎಂದೇನಾದರೂ ನಿರ್ಲಕ್ಷ ವಹಿಸುತ್ತಿದ್ದಾರಾ?