ಬ್ಯೂಟಿ ಪಾರ್ಲರ್ ನಡೆಸುತ್ತಿರುವಂತಹ ಮಹಿಳೆಗೆ ಬಂದೂಕು ತೋರಿಸಿ ಅತ್ಯಾಚಾರ ನಡೆಸಿರುವಂತಹ ಘಟನೆ ಗಜಿಯಾಬಾದ್ ನ ಮುರಾದ್ ನಗರದಲ್ಲಿ ನಡೆದಿದೆ.
ಬ್ಯೂಟಿ ಪಾರ್ಲರ್ ನ ಬಗ್ಗೆ ಜಾಹೀರಾತನ್ನು ನೀಡಿದ್ದು ಅದರ ಮೂಲಕ ಆ ವ್ಯಕ್ತಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವಂತಹ ಮಹಿಳೆಗೆ ಸಂಪರ್ಕಗೊಂಡು ಬ್ಯೂಟಿ ಪಾರ್ಲರ್ಗೆ ಗಿರಾಕಿಗಳನ್ನು ಕಳುಹಿಸುವುದಾಗಿ ಹೇಳಿ ಒಂದು ದಿನ ಮಹಿಳೆ ಒಬ್ಬರೇ ಇರುವಂತಹ ಸಂದರ್ಭದಲ್ಲಿ ಬಂದು ಬಂದೂಕು ತೋರಿಸಿ ಅತ್ಯಾಚಾರವೆಸಗಿರುತ್ತಾನೆ ಹಾಗೂ ಅದನ್ನು ವಿಡಿಯೋ ಚಿತರಿಸಿಕೊಂಡಿರುತ್ತಾನೆ.
ಈ ವಿಚಾರವನ್ನು ಹೊರಗೆ ಬಾಯಿ ಬಿಟ್ಟರೆ ವಿಡಿಯೋವನ್ನು ಹೊರಹಾಕುತ್ತೇನೆ ಎಂದು ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗಿರುತ್ತಾನೆ.
ಅಘಾತಕ್ಕೆ ಒಳಗಾದ ಮಹಿಳೆ ಮನನೊಂದು ತನ್ನ ಪತಿಯ ಬಳಿ ಎಲ್ಲಾ ವಿಚಾರಗಳನ್ನು ಹೇಳಿಕೊಂಡಿರುತ್ತಾರೆ. ಈ ವಿಚಾರದ ಬಗ್ಗೆ ಭಾನುವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.