ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ವಿ ಎಸ್ ದೊಡ್ಡಿ ಗ್ರಾಮದಲ್ಲಿ ರಾಚಾ ಶೆಟ್ಟಿ ಎಂಬುವವರು ಮೃತಪಟ್ಟಿದ್ದು ಆ ಊರಿನಲ್ಲಿ ಸ್ಮಶಾನದ ಜಾಗವಿಲ್ಲದ ಕಾರಣ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಜಮೀನು ಮಾಲೀಕನ ಬಳಿ ಅಂಗಲಾಚಿ ಬೇಡಿಕೊಂಡು ಬೆಳೆ ಕಟಾವು ಮಾಡಿಸಿ ಮೃತನ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸುತ್ತಾರೆ.
ಈ ಗ್ರಾಮದಲ್ಲಿ ಸುಮಾರು 400 ಕುಟುಂಬಗಳಿದ್ದು ಹಲವು ಬಾರಿ ಗ್ರಾಮಸ್ಥರು ಸ್ಮಶಣಕ್ಕೆಂದು ಜಾಗ ಮಂಜೂರು ಮಾಡಲು ಹಲವು ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದ್ದರು ಸಹ ಯಾವುದೇ ರೀತಿ ಪ್ರಯೋಜನವಾಗಿಲ್ಲವೆಂದು ದೂರಿದ್ದಾರೆ.
ಈ ಮೊದಲು ಅರಣ್ಯ ಇಲಾಖೆ ಪ್ರದೇಶದಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದು ಅರಣ್ಯ ಇಲಾಖೆಯವರು ಆ ಸ್ಥಳಗಳಲ್ಲಿ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡದ ಕಾರಣ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಹೇಳಿಕೊಂಡಿರುತ್ತಾರೆ.

error: Content is protected !!