ಗಂಗಾವತಿ ನಗರದ ಮಹಾವೀರ ವೃತ್ತದ ಬಳಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೆಲವು ಮುಸ್ಲಿಂ ಯುವಕರು ಕೇಸರಿ ಬಿಳಿ ಹಸಿರು ಬಾವುಟದ ಮಧ್ಯೆ ಅಶೋಕ ಚಕ್ರದ ಬದಲು ಚಂದ್ರ ಹಾಗೂ ನಕ್ಷತ್ರ ಇರುವಂತಹ ಬಾವುಟವನ್ನು ಆರಿಸುತ್ತಿದ್ದಾಗ ಪೊಲೀಸರ ಕಣಿಗೆ ಬಿದ್ದಿದ್ದಾರೆ.
ಇದನ್ನು ಕಂಡ ಪೊಲೀಸರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುತ್ತಿರುವಂತಹ ಯುವಕರನ್ನು ಹಿಡಿಯಲು ಮುಂದಾಗಿದ್ದಾರೆ. ಮುಸ್ಲಿಂ ಯುವಕರು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಈ ವಿಚಾರವಾಗಿ ಗಂಗಾವತಿ ನಗರ ಪೊಲೀಸರು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿರುತ್ತಾರೆ.