ಕಳೆದ ಏಳು ವರ್ಷದ ಹಿಂದೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಂಪುರ ಗ್ರಾಮದ ಶಾಂತವಾಳನ್ನು ಧಾರವಾಡ ಜಿಲ್ಲೆಯ ಕುಂದುಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ರಾಜಪ್ಪನಿಗೆ ನೀಡಿ ಮದುವೆ ಮಾಡಿರುತ್ತಾರೆ. ಇವರಿಗೆ ಮೂರು ಮಕ್ಕಳು ಸಹ ಇರುತ್ತವೆ.
ಮೂರು ಮಕ್ಕಳಾದ ಮೇಲೂ ಸಹ ರಾಜಪ್ಪ ಹೆಂಡತಿಯ ಮೇಲೆ ಸಂಶಯ ಬೀಳುತ್ತಿರುತ್ತಾನೆ. ಹಾಗಾಗಿ ಇವರಿಬ್ಬರ ಮಧ್ಯೆ ಆಗಾಗ ಜಗಳವಾಗುತಲೆ ಇರುತ್ತದೆ.
ಕೆಲವು ದಿನಗಳ ಹಿಂದೆ ಗಣೇಶ ಹಬ್ಬದ ದಿನದಂದು ಗಂಡ ಹೆಂಡತಿ ಜಗಳ ಮಾಡಿಕೊಂಡಿರುತ್ತಾರೆ ಜಗಳ ಅತಿರೇಕಕ್ಕೆ ತಿರುಗಿದ್ದು ಶಾಂತವ ತನ್ನ ತವರು ಮನೆಗೆ ಬಂದಿರುತ್ತಾಳೆ.
ತಡರಾತ್ರಿ ಹೆಂಡತಿಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಕಂದಾಪುರಕ್ಕೆ ಬಂದ ರಾಜಪ್ಪ ಶಾಂತವಾಳ ತವರೂ ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ರಾತ್ರಿ 11:00 ಸುಮಾರಿಗೆ ಶಾಂತವಾಳ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿರುತ್ತಾನೆ.
ಶಂತವಳನ್ನು ಗದಗದ ವಿಂಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾಂತವ್ವ ಮೃತಪಟ್ಟಿರುತ್ತಾರೆ.
ಈ ವಿಚಾರವಾಗಿ ಶಾಂತವಾಳ ಮನೆಯವರು ರಾಜಪ್ಪ ತಮ್ಮ ಹೆಂಡತಿಯ ಮೇಲೆ ಅನುಮಾನ ಪಡುತ್ತಿದ ಅದಕ್ಕಾಗಿ ಈ ರೀತಿ ಮಾಡಿದ್ದಾನೆ ಎಂದು ಹೇಳಿಕೊಂಡಿರುತ್ತಾರೆ. ಮುಂಡರಗಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ.