ಬೆಂಗಳೂರಿನ ವಿಕಾಸ್ ಹಾಗು ಪ್ರತಿಭಾ ಇಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಪ್ರೀತಿ ಅತಿಯಾದಾಗ ಸಹಜವಾಗಿ ತನ್ನ ವ್ಯಾಪ್ತಿ ಮೀರಿ ಇಬ್ಬರ ಮದ್ಯೆ ಏನು ನಡೆಯಬೇಕು ಎಲ್ಲವು ನಡೆದಿದೆ.
ಎಲ್ಲಾ ಪ್ರೇಮಿಗಳಂತೆ ನಮ್ಮ ಪ್ರೀತಿಯ ಪಯಣ ಚೆನ್ನಾಗಿ ಸಾಗುತ್ತಿದೆ ಅಂದುಕೊಂಡ ವಿಕಾಸನಿಗೆ ಮುಂದೆ ತಾನು ಪ್ರೀತಿಸಿದ ತನ್ನ ಪ್ರೇಯಸಿಯೇ ನನಗೆ ಮರಣ ಶಾಸನ ಬರೆಯುತ್ತಾಳೆ ಎಂಬುದರ ಬಗ್ಗೆ ಎಳ್ಳಷ್ಟೂ ಸುಳಿವಿರಲಿಲ್ಲ.
ಮುಂದೆ ನಡೆದಿದ್ದೇಲ್ಲವೂ ದುರಂತ ಕತೆ.
ದಿನ ಕಳೆದಂತೆ ವಿಕಾಸ್ ಮತ್ತು ಪ್ರತಿಭಾ ಪ್ರೀತಿ ಮಧ್ಯೆ ಬಿರುಕು ಮೂಡಲು ಆರಂಭವಾಯಿತು.
ಅಷ್ಟಕ್ಕೂ ಇವರಿಬ್ಬರ ಪ್ರೀತಿಗೆ ವಿಲನ್ ನಂತೆ ಬಂದಿದ್ದು ಸುಶೀಲ್ ಎಂಬ ವ್ಯಕ್ತಿ.
ಹೆಣ್ಣುಮಾಯೇ ಹೊನ್ನು ಮಾಯೆ ಎಂಬಂತೆ
ಪ್ರತಿಭಾ ವಿಕಾಸನಿಗೆ ಯಾಮಾರಿಸಿ ಸುಶೀಲ ಎಂಬಾತನ ಜೊತೆ ಸದ್ದಿಲ್ಲದೇ ಸಂಘ ಬೆಳಸಿದ್ದಳು.
ಪ್ರೀತಿ ಹೆಸರಲ್ಲಿ ಇಬ್ಬರನ್ನು ಬುಟ್ಟಿಗೆ ಬೀಳಿಸಿಕೊಂಡು ಒಬ್ಬನಿಗೆ ಮಂಚದ ಸುಖ ನೀಡುತ್ತಾ ಮತ್ತೊಮ್ಮೆನಿಗೆ ಮಸಣದ ಹಾದಿ ತೋರಿಸುವ ಹಾದರಗಿತ್ತಿ ಪ್ರತಿಭಾಳ ನೌಟಂಕಿ ಆಟ ವಿಕಾಸ ನಿಗೂ ತಿಳಿಯಿತು.
ಪಾಪ ಪ್ರೀತಿ ಆಚೇಗಿನ ಆಟದಲ್ಲಿ ಇನ್ನು ಪಕ್ವತೆ ಹೊಂದಿರದ ಈ ವಿಕಾಸ್ ಮಾತ್ರ ಇವಳ ಕಳ್ಳಾಟಕ್ಕೆ ಬುದ್ದಿವಾದ ಹೇಳುವ ಮೂಲಕ ಬ್ರೇಕ್ ಹಾಕಲು ಮುಂದಾಗಿದ್ದಾನೆ.
ಅದರಂತೆ ಪ್ರತಿಭಾ ಳಿಗೆ ಸುಶೀಲನ ಸ್ನೇಹ ತೋರಿಯುವಂತೆ ನೀತಿ ಪಾಠ ಹೇಳಿದ್ದಾನೆ ಇಷ್ಟಕ್ಕೂ ನನ್ನ ಮಾತುಕೇಳದೆ ಹೋದರೆ ನಾನು ನಿನ್ನ ಜೊತೆ ನಡೆಸಿದ ಏಕಾಂತ ಸೇವೆಯ
ವಿಡಿಯೋ ವನ್ನು ಹೊರ ಜಗತ್ತಿಗೆ ಹರಿಬಿಡುವ ಎಚ್ಚರಿಕೆ ಕೂಡ ನೀಡಿದ್ದನು.
ಆದರೆ ವಿಕಾಸನ ಬುದ್ದಿವಾದದ ಬೆದರಿಕೆ ಬಗ್ಗದ ಪ್ರತಿಭಾ ಸುಶೀಲನ ಜೊತೆ ಲವ್ವಿ ಡವ್ವಿ ಮುಂದುವರೆಸಿದ್ದಾಳೆ.
ಇದರಿಂದ ಕೋಪಗೊಂಡ ವೈದ್ಯ ವಿಕಾಸ್ ಪ್ರತಿಭಾಳ ಜೊತೆ ಆಟವಾಡಿದ್ದ ರತಿಕ್ರೀಡೆಯ ಟ್ರೈಲರ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.
ಇದರಿಂದ ಕೆರಳಿದ ಪಡ್ಡೆ ಹುಡುಗಿ ಪ್ರತಿಭಾ ತನ್ನ ಎರಡನೇ ಪ್ರಿಯಕರ ಸುಶೀಲ ಜೊತೆ ಸೇರಿ ಮೊದಲ ಪ್ರಿಯತಮ ವಿಕಾಸ್ ನಿಗೆ ಯಮಲೋಕಕ್ಕೆ ಕಳುಹಿಸಲು ಸ್ಕೆಚ್ ಹಾಕಿ ಮುಹೂರ್ತ ಫಿಕ್ಸ್ ಮಾಡಿದಳು.
ಎಲ್ಲವೂ ಮೊದಲೇ ಅಂದುಕೊಂಡ ಪ್ಲಾನಿಂಗ್ ನಂತೆ ಕಿಲಾಡಿ ಹೆಂಗಸು ಪ್ರತಿಭಾ ಮಾತನಾಡಬೇಕು ಎಂದು ಹೇಳಿ ವಿಕಾಸ್ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಮನೆಯಲ್ಲಿ ವಿಕಾಸ್ ನನ್ನು ಕೂಡಿಹಾಕಿ ಪ್ರತಿಭಾ ಇವಳ ಪ್ರಿಯಕರ ಸುಶೀಲ್ ಸಹಚರರು ಸೇರಿಕೊಂಡು ಮನೋಸೋ ಇಚ್ಛೆ ತಳಿಸಿ ಚನ್ನಾಗಿ ಡ್ರಿಲಿಂಗ್ ಮಾಡಿದ್ದಾರೆ.
ನಾಲ್ವರು ನೀಡಿದ ಗುದ್ದಿಗೆ ಪ್ರತಿಭಾ ಳ ಮನೆಯಲ್ಲೆ ವೈದ್ಯ ವಿಕಾಸನ ಪ್ರಾಣಪಕ್ಷಿ ಹಾರಿಹೋಗಿ ಪರಮಾತ್ಮ ಪಾದ ಸೇರಿಕೊಂಡಿದೆ.
ಇನ್ನು ಡಬಲ್ ಡ್ರೈವರ್ ಗಳ ಲೈಫ್ ಜೊತೆ ಆಟವಾಡಿ ಓರ್ವ ನ ಪ್ರಾಣ ತೆಗೆದ 420 ಪ್ರತಿಭಾ ಹಾಗು ಪ್ರಿಯಕರ ಸುಶೀಲ್ ಮತ್ತು ಆತನ ಸಹಚರರಾದ ಗೌತಮ್, ಸೂರ್ಯ ಎಂಬ ಆರೋಪಿಗಳನ್ನ ಬಂಧಿಸಿರುವ ಬೇಗೂರು ಠಾಣೆ ಪೊಲೀಸ ರು ಕೊಲೆಗಾರ ಕಿರಾತಕರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡು ಸೂಕ್ತ ಸಾಕ್ಷ್ಯಧಾರಗಳನ್ನು ಕಲೆ ಹಾಕುತ್ತಿದ್ದಾರೆ.