ತೋಟದಲ್ಲಿ ಕೆಲಸ ಮಾಡುತ್ತಿದ್ದಂತಹ ಕುಟುಂಬದ 14 ಜನರನ್ನು ಕೂಡಿಹಾಕಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಕಾರ್ಮಿಕರು ಮಾಲೀಕನಿಗೆ ಹಣ ಕೊಡಬೇಕಾಗಿತ್ತು, ಅದರಿಂದ ಕೂಡಿ ಹಾಕಿದ್ದೇನೆ ಎಂದು ಹೇಳಿಕೊಂಡಿರುವ ವಿಡಿಯೋ ಹೊರ ಬಿದ್ದಿದೆ.
ಅಸಲಿಯ ವಿಚಾರ ಪೊಲೀಸರ ತನಿಖೆಯ ನಂತರ ಬೆಳಕಿಗೆ ಬಂದಿದೆ ತೋಟದಲ್ಲಿ ಕೆಲಸ ಮಾಡುವಂಥವರ ಮನೆಯ ಚಿಕ್ಕ ಮಕ್ಕಳ ಜಗಳಕ್ಕಾಗಿ ಮಾಲೀಕ ಕುಟುಂಬದ ಎಲ್ಲರನ್ನು ಕೂಡಿಹಾಕಿ ಅವರ ಬಳಿ ಮೊಬೈಲ್ ಗಳನ್ನು ಕಸಿದುಕೊಂಡಿರುತ್ತಾನೆ. ಆ ಕುಟುಂಬದಲ್ಲಿ ಇದ್ದಂತಹ ಎರಡು ತಿಂಗಳ ಗರ್ಭಿಣಿ ಒಬ್ಬಳು ಮೊಬೈಲ್ ಕೊಡಲು ನಿರಾಕರಿಸಿದ ಸಂದರ್ಭದಲ್ಲಿ ಹಲ್ಲೆ ನಡೆಸಿರು ಕಾರಣ ಗರ್ಭಪಾತವಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತೋಟದ ಮಾಲೀಕ ಜಗದೀಶ್ ಹಾಗೂ ತಿಲಕ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.