ಉತ್ತರಕನ್ನಡ ಜಿಲ್ಲೆಯಲ್ಲಿ ನಮಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೆಲೆ ಬಾಳುವ ಮರಗಿಡಗಳು ಹಾಗೂ ದಟ್ಟ ಕಾಡು ಮಲೆನಾಡು ಪ್ರದೇಶ ಎಂದೂ ಹೆಸರುವಾಸಿಯಾಗಿದೆ. ನಮಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಮಾತಿನಂತೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅರಣ್ಯ ಸಂಪತ್ತಿದೆ ಅದನ್ನು ರಕ್ಷಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಈ ಜೆಲ್ಲೆಯಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಮರಗಳ್ಳರು ಬೆಲೆ ಬಾಳುವ ಅರಣ್ಯ ಸಂಪತ್ತನ್ನು ನಾಶಗೊಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನ ಉಳ್ಳುರು ,ಅಬ್ಬಳ್ಳಿ , ಹೆರೊಳ್ಳಿ, ಹಿಂಡಬೈಲ್ ಸಂತೆಗುಳಿ ಮುಂಡಗೋಡ ತಾಲೂಕಿನ ಕಾತುರು ವಲಯ ಹಾಗೂ ಯಲ್ಲಾಪುರ ಬನವಾಸಿ ಸಿರ್ಸಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಪರಿಸರವನ್ನು ನಾಶಗೊಳಿಸುತ್ತಿರುವುದು ಬೇಸರದ ವಿಷಯವಾಗಿದೆ .
ಇದನ್ನು ತಿಳಿದೂ ತಿಳಿಯದ ಹಾಗೆ ಇಲ್ಲಿನ ಅಧಿಕಾರಿಗಳು ಯಾಕೆ ಸುಮ್ಮನೆ ಕುಳಿತಿದ್ದಾರೆ ತಿಳಿಯುತ್ತಿಲ್ಲ..ಇನ್ನಾದರೂ ಕಾಡನ್ನು ನಾಶಗೊಳಿಸುವುದು ಮತ್ತು ಬೆಲೆ ಬಾಳುವ ಅರಣ್ಯ ಸಂಪತ್ತನ್ನು ಮರಗಳ್ಳರ ಪಾಲಾಗದಂತೆ ಸಂಭಂದ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕಾಗಿದೆ.
ವರದಿ: ಶ್ರೀಪಾದ್ ಹೆಗಡೆ