ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ದಲಿತ ಕುಟುಂಬಗಳ ಮನೆಗಳಿಗೆ ನೀರು ನುಗ್ಗಿದರಿಂದ ದಲಿತ ಸಮುದಾಯದ ಜನರಿಗೆ ವಾಸಿಸಲು ಸರಿಯಾದ ವ್ಯವಸ್ತೆ ಇಲ್ಲದಿರುವುದರಿಂದ ಗುಡಿಗಳಲ್ಲಿ ವಾಸ ಮಾಡಿ ಜನರು ಬೇಸತ್ತು ಇಂದು ಮುಧೋಳ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಆಡಳಿತ ಸರ್ಕಾರಕ್ಕೆ ದಿಕ್ಕಾರ ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯರಾದ
ತಿಮ್ಮಣ್ಣ ಬಟಕುರ್ಕಿ ಮಾತನಾಡಿ ನಾವು ಕಳೆದ ಮೂರು ವರ್ಷಗಳಿಂದ ಹಲವಾರು ಬಾರಿ ಮನವಿ ಕೊಟ್ಟರೂ ಕೂಡಾ ತಾಲೂಕ ಆಡಳಿತ ಅಧಿಕಾರಿಗಳು ಯಾವುದೇ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಿ ಕೊಡದೆ ದಲಿತ ಸಮುದಾಯದ ಕುಟುಂಬಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಆದಕಾರಣ ನಮ್ಮ ಗ್ರಾಮದ ಎಲ್ಲಾ ದಲಿತ ಕುಟುಂಬದ ಜನರಿಗೆ ಸರಿಯಾದ ವ್ಯವಸ್ತೆ ಕಲ್ಪಿಸಿ ಕೊಡಬೇಕು ಇಲ್ಲದಿದ್ದರೆ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾತನಾಡಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಧೋಳ ತಹಶೀಲ್ದಾರ ಹಾಗೂ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಿರುವ ವಿನೋದ್ ಹತ್ತಳ್ಳಿ ರವರು ಮತ್ತು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಮುಧೋಳ ಅಧಿಕಾರಿಗಳಾದ ಮೋಹನ್ ಕೋರಡ್ಡಿ ರವರು ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕಿರಣ್ ಘೋರ್ಪಡೆ ರವರು ಕೂಡಿಕೊಂಡು ಜನರಿಗೆ ನಾವು ನಿಮಗೆ ಸರಿಯಾದ ವ್ಯವಸ್ತೆ ಕಲ್ಪಿಸಿ ಕೊಡುತ್ತೇವೆ ಹೋರಾಟ ಕೈ ಬಿಡಿ ಎಂದು ಮನವಿ ಮಾಡಿಕೊಳ್ಳುವುದರ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರಿಂದ ಎಲ್ಲಾ ಜನ ಹೋರಾಟ ಕೈಬಿಡಲು ಮುಂದಾದರೂ.
ವರದಿ:- ಆಶೋಕ ಗುರಕೇರ