ಕುಂದಗೋಳ: ತಾಲೂಕಿನ ಯರಗುಪ್ಪಿ ಮಾರ್ಗವಾಗಿ ಮುಳಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಟಾಚಾರಕ್ಕೆ ಮಣ್ಣು ಹಾಕಿ ರಸ್ತೆ ದುರಸ್ತಿ ಪಡಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅಕ್ಟೋಬರ್ 5 ರಂದು ರಸ್ತೆ ದುರಸ್ತಿ ಯಾವಾಗ? ಎಂಬ ಶೀರ್ಷಿಕೆ ಸುದ್ದಿ ಬಿತ್ತಿರಸಿದ ಹಿನ್ನೆಲೆ ಎಚ್ಚತ್ತು ಅಧಿಕಾರಿಗಳು ಕಲ್ಲಿನ ಗೊರಸು ಹಾಕಿ ರಸ್ತೆ ದುರಸ್ತಿ ಭಾಗ್ಯ ಒದಗಿಸಿದರೂ ಅದು ಪೂರ್ಣವಾಗಿ ಸುರಕ್ಷಿತ ರಸ್ತೆ ಮಟ್ಟ ತಲುಪಿಲ್ಲ.

ಹೇಳಿಕೊಳ್ಳುವಂತ ಕೆಲಸ ಕಾರ್ಯ ಆಗದೇ ಇರುವುದು ಸಾರ್ವಜನಿಕರಿಗೆ ಮತ್ತೆ ನಿರಾಸೆ ಉಂಟು ಮಾಡಿದೆ.

ಪ್ರವಾಹದಿಂದ ಹಾಳಾದ ರಸ್ತೆಗಳು ದುರಸ್ತಿ ಭಾಗ್ಯ ಕಂಡುಕೊಳ್ಳಲು ಸಫಲತೆ ಕಾಣ್ತಾ ಇದ್ದವೆ. ದೊಡ್ಡ ದೊಡ್ಡ ಗುಂಡಿಗಳು ಬಿದ್ದರು ಸಹ ಎರಡು ಲೋಡ್ ಗೊರಸು ಮಣ್ಣು ಹಾಕಿ ಕಾಮಗಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು ವರದಿಗೆ ಎಚ್ಚೆತ್ತು ದುರಸ್ತಿ ಭಾಗ್ಯ ಒದಗಿಸಿದ್ದಾರೆ. ಇದು ಸಂಪೂರ್ಣವಾಗುವ ವಿಶ್ವಾಸ ಜನರಲ್ಲಿ ಮೂಡುವ ತರ ಕೆಲಸ ಸಾಗಲಿ ಎನ್ನುವುದು ಸಾರ್ವಜನಿಕರ ಬಯಕೆಯಾಗಿದೆ.

ವರದಿ: ಶಾನು ಯಲಿಗಾರ

error: Content is protected !!