ಕುಂದಗೋಳ; ಇದು ವಿಶ್ರಾಂತಿ ಗೃಹ ಇಲ್ಲಿ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿಶ್ರಾಂತಿ ಪಡೆಯಲು ವಿಶ್ರಾಂತಿ ಗೃಹಕ್ಕೆ ಆಗಮಿಸುತ್ತಾರೆ. ಆದರೆ ಇಲ್ಲಿ ದುಸ್ಥಿತಿ ಅಷ್ಟಿಷ್ಟಲ್ಲ ,ನೀರು ಕಲುಷಿತಯಿಂದ ಕೊಡಿದ್ದು ಗಬ್ಬೆದ್ದು ದುರ್ವಾಸನೆ ಬರ್ತಾ ಇದ್ದರು, ಸಹ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಎಡ ಭಾಗದ ಕುಂದಗೋಳ ಪಟ್ಟಣದಲ್ಲಿ ಗಣ್ಯವ್ಯಕ್ತಿಗಳ ವಿಶ್ರಾಂತಿ ಗೃಹ ಇದ್ದು, ಮಳೆಗೆ ನೀರು ಸಂಗ್ರಹವಾಗಿ ಕಲುಷಿತಗೊಂಡು ದುರ್ವಾಸನೆಗೆ ಎಡೆ ಮಾಡಿ ಕೊಟ್ಟಿದೆ, ಇನ್ನೂ ರೋಗ ರುಜನೆಗೆ ಆಹ್ವಾನ ನೀಡುವು ರೀತಿಯಲ್ಲಿ ಕಾಣತೋಡಗಿದೆ, ಹೀಗಾಗಿ ಇಲ್ಲಿ ಸಾಕಷ್ಟು ಜನಪ್ರತಿನಿಧಿಗಳು ಹಾಗೂ ಎಲ್ಲ ಸರಕಾರಿ ಇಲಾಖೆಯ ಅಧಿಕಾರಿಗಳು ರೆಸ್ಟ್ ಮಾಡಲು ಈ ಗಣ್ಯವ್ಯಕ್ತಿಗಳ ವಿಶ್ರಾಂತಿ ಗೃಹಕ್ಕೆ ಬರುತ್ತಾರೆ.
ಆದರೆ ಇಲ್ಲಿ ಅವವ್ಯಸ್ಥೆ ಕಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ತಾಲೂಕಿನ ಎಲ್ಲೆಡೆ ರಸ್ತೆ ಮಾಡುವು ಲೋಕೋಪಯೋಗಿ ಇಲಾಖೆ ಕೂಡ ಇಲ್ಲೆ ಇದೆ. ನಮಗೂ ಇದಕ್ಕೂ ಸಂಬಂಧನೆ ಇಲ್ಲ ಹಾಗೇ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ ಹೇಳಿ.
ಪ್ರತಿಸಲ ಮಳೆ ಬಂದಾಗ್ಲೋ ನೀರು ಆವರಿಸಿಕೂಳ್ಳುತ್ತದೆ ಆದರೂ ಸಹ ಅವವ್ಯಸ್ಥೆ ಮುಂದುವರೆಯುತ್ತದೆ. ಇಲ್ಲಿಯೇ ಅಧಿಕಾರಿಗಳು ಮಾತ್ರ ಅದೇ ನೀರಲ್ಲಿ ಓಡಾಡಿಕೊಂಡು ಕಛೇರಿಗೆ ತಲುಪುತ್ತಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ತಾವೇ ನಿರಕರಿಸುತ್ತಿದ್ದಾರೆ. ಅಂತ ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತದೆ.
ವರದಿ; ಶಾನು ಯಲಿಗಾರ