ಬ್ರಿಟನ್ ನ ಆಸ್ಪತ್ರೆಯೊಂದರಲ್ಲಿ 7 ಹಸುಗೂಸುಗಳ ಸಾವಿನ ಪ್ರಕರಣ ಬೆನ್ನು ಹತ್ತಿದ ಪೊಲೀಸರು ನರ್ಸ್ ಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಘಾತಕಾರಿ ವಿಷಯ ಹೊರಹಾಕಿದ್ದಾಳೆ.
ಈಶಾನ್ಯ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ಕ್ರೌನ್ ಸಿಟಿ ಕೋರ್ಟ್ ನಲ್ಲಿ 32 ವರ್ಷದ ನಿಯೊ ನಟಾಲ್ ನರ್ಸ್ ಲೂಸಿ ಲೆಟ್ಬೆ ವಿಚಾರಣೆ ಸಂದರ್ಭದಲ್ಲಿ ನಾನು ತುಂಬಾ ಕೆಟ್ಟವಳು.
ನಾನು ದೆವ್ವ. ಅದಕ್ಕೆ ಹೀಗೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾಳೆ.
ನಾನು ಬದುಕಲು ಅನರ್ಹಳು. ನಾನಗೆ ಅವರನ್ನು ನೋಡಿಕೊಳ್ಳುವ ಯೋಗ್ಯತೆ ಇರಲಿಲ್ಲ. ಹಾಗಾಗಿ ಉದ್ದೇಶಪೂರ್ವಕವಾಗಿಯೇ ಕೊಂದೆ ಎಂದು ನರ್ಸ್ ಹೇಳಿದ್ದಾಳೆ.
೨೦೧೫ ಜೂನ್ ನಿಂದ 2016 ಜೂನ್ ಅವಧಿಯಲ್ಲಿ ಚೆಸ್ಟರ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳು ಅಸಹಜವಾಗಿ ಮೃತಪಟ್ಟಿದ್ದವು. ಇದರ ತನಿಖೆ ನಡೆಸಿದ ಪೊಲೀಸರು ನರ್ಸ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.