ಯಲ್ಲಾಪುರ ತಾಲೂಕಿನ ರೈತ ಮಂಜುನಾಥನ ಎನ್ನುವವರ ಹಸು ಹುಲಿಯ ದಾಳಿಗೆ ಒಳಪಟ್ಟು ಸಾವನ್ನಪ್ಪಿದೆ. ರೈತರು ಎಂದರೆ ದೇಶದ ಬೆನ್ನೆಲುಬು. ಯಾರಾದರೂ ರೈತರಿಗೆ ಅನ್ಯಾಯ ಮಾಡಿದರೆ ದೇವರು ಕೂಡ ಮೆಚ್ಚುವುದಿಲ್ಲ. ಅಧಿಕಾರಿಗಳು ರೈತರಿಗೆ ಸ್ಪಂದಿಸಬೇಕು. ರೈತರಿಗೆ ತಾವು ಸಾಕಿದ ದನಕರುಗಳ ಆಧಾರ ರೈತರು ತಮಗೆ ಒಂದು ಹೊತ್ತು ಊಟ ಸಿಗದಿದ್ದರೂ ತೊಂದರೆಯಿಲ್ಲ. ಆದರೆ ತಮ್ಮ ದನಕರುಗಳಿಗೆ ಒಂದು ಹೊತ್ತು ಊಟ ಕಡಿಮೆ ಆಗಬಾರದು ಎಂದು ಕಾಳಜಿ ಮಾಡುತ್ತಾರೆ.
ಆದರೇ ವಿಧಿ ಏಷ್ಟು ಕ್ರೂರ ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವ್ಯಾಪ್ತಿಯಲ್ಲಿ ಒಂದು ದುರ್ಘಟನೆ ನಡೆದಿದೆ. ಇಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಅರಣ್ಯದಿಂದ ಒಂದು ಹುಲಿ ಬಂದು ಒಂದು ಜಾನುವಾರುವಿನ ಮೇಲೆ ದಾಳಿ ಮಾಡಿ ಜಾನುವಾರು ಕೊನೆಯುಸಿರು ಎಳೆಯುವ ವರೆಗೂ ಹಲ್ಲೆ ಮಾಡಿದೆ ಮಂಜುನಾಥ ಎಂಬ ರೈತ ಮಾಗೋಡು ಗ್ರಾಮದ ತನ್ನ ಮನೆಯ ಹೊರಗೆ ಕೊಟ್ಟಿಗೆಯಲ್ಲಿ ತನ್ನ 4-5 ದನವನ್ನು ಕಟ್ಟಿದ್ದರು. ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ಹುಲ್ಲು ಮೇಯಲು ಹೋದಾಗ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಹುಲಿ ದಾಳಿ ಮಾಡಿದಾಗ ಒಂದು ಹಸುವು ಹುಲಿ ದಾಳಿಗೆ ಸಿಕ್ಕಿ ಸವನಪ್ಪಿರುತ್ತದೆ. ಹುಲಿಯು ದಾಳಿ ಮಾಡಿದ ಸಂದರ್ಭದಲ್ಲಿ ಹಸುವು ಕಿರುಚಿಕೊಂಡಾಗ ಸುತ್ತಮುತ್ತಲಿನ ಗ್ರಾಮಸ್ಥರು ಬಂದಕೂಡಲೇ ಹುಲಿ ಹಸುವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದೆ.
ಈ ವಿಷಯ ತಿಳಿದ ಯಲ್ಲಾಪುರ ಅರಣ್ಯ ವಿಭಾಗದ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.ಇನ್ನೂ ಈ ಘಟನೆಯಿಂದ ಮಾಗೋಡು ಗ್ರಾಮದ ಜನ ಭಯ ಭಿತರಾಗಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಯನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುತ್ತಾರಾ ಎಂದು ಕಾದು ನೋಡಬೇಕಾಗಿದೆ.
ವರದಿ:ಶ್ರೀಪಾದ್ ಹೆಗಡೆ