ಖಚಿತ ಮಾಹಿತಿ ಪಡೆದ ಬೆಂಡಿಗೇರಿ ಪೊಲೀಸ್ ಠಾಣೆಯ ಸಿಪಿಐ ಶ್ಯಾಮರಾಜ್ ಸಜ್ಜನ್ ಮತ್ತು ಪಿಎಸ್ಐ ಶರಣ್ ದೇಸಾಯಿ ರವರು ಹುಬ್ಬಳ್ಳಿಯಲ್ಲಿ 2 ತಲೆಯ ಹಾವನ್ನು ಮಾರಾಟ ಮಾಡಲು ಬಂದಿದ್ದ ಖತರ್ನಾಕ್ ಆಸಾಮಿಗಳನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕಳೆದ ರಾತ್ರಿ ಖಚಿತ ಮಾಹಿತಿ ಮೇರೆಗೆ ಶ್ಯಾಮರಾಜ್ ಸಜ್ಜನ್ ಮತ್ತು ಶರಣ್ ದೇಸಾಯಿ ಹಾಗೂ ಸಿಬ್ಬಂದಿ ವರ್ಗದವರ ಜೊತೆ ಚರ್ಚಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಹೊರವಲಯದ ಗಬ್ಬೂರು ಬೈಪಾಸ್ ಕಡೆ ಇರುವ ರಿಲಯನ್ಸ್ ಮಾರ್ಟ್ ಬಳಿ ದಾಳಿ ಮಾಡಿದಾಗ ಹೊರ ರಾಜ್ಯದ ಒಂದು ಕಾರಿನಲ್ಲಿ 3 ಜನ ಆಸಾಮಿಗಳು 2 ತಲೆಯ ಹಾವನ್ನು ಮಾರಾಟಕ್ಕೆ ತಂದಿರುವ ರಹಸ್ಯ ಬಯಲಾಗಿದೆ.
ಕೂಡಲೇ ಸಿಪಿಐ ಮತ್ತು ಪಿಎಸ್ಐ ರವರು ಈ ಸದರಿ ಆಸಾಮಿಗಳ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾರನ್ನು ವಶನ್ನು ಪಡೆದು 2 ತಲೆಯ ಹಾವನ್ನು ರಕ್ಷಣೆ ಮಾಡಿದ್ದರೆ ಹಾಗೂ ಈ 3 ಜನ ಆರೋಪಿತರು ರಾಯಚೂರು ಮೂಲದವರಾಗಿದ್ದು ತನಿಖೆಯಲ್ಲಿ ತಿಳಿದಿದ್ದು ಅವರನ್ನೂ ನ್ಯಾಯಾಂಗ ಬಂಧನ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ : ಶಿವು ಹುಬ್ಬಳ್ಳಿ .