ಕರ್ನಾಟಕ ರಾಜ್ಯದಲ್ಲಿ ಹುಬ್ಬಳ್ಳಿ ( ಛೋಟಾ ಮುಂಬೈ ) ವಾಣಿಜ್ಯ ನಗರ ಎಂದರೇ ಯಾರಿಗೇ ಗೊತ್ತಿಲ್ಲ ಅನ್ನೋ ಮಾತಿಲ್ಲ. ಎಲ್ಲರಿಗೂ ಪರಿಚಿತ ಸ್ಥಳ ಈ ಹುಬ್ಬಳ್ಳಿ. ಇತ್ತೀಚಿನ ದಿನಗಳಲ್ಲಿ ಈ ಹುಬ್ಬಳ್ಳಿ ” ಸ್ಮಾರ್ಟ್ ಸಿಟಿ” ಎಂದೂ ಹೆಸರು ಗಳಿಸಿದೆ ಅದೂ ಹೆಸರಿಗೆ ಅಷ್ಟೇ ಎನ್ನುವ ಸ್ಥಿತಿ ಬರುತ್ತಿದೆ ಏಕೆಂದರೆ ಹುಬ್ಬಳ್ಳಿ ನಗರ ಪ್ರದೇಶದಲ್ಲಿ ಬರುವ ಸಾಯಿನಗರ ರಸ್ತೆ ಮತ್ತು ನಿವಾಸಿಗಳ ಕೊರತೆಗಳನ್ನು ಯಾರೂ ಕಣ್ತೆರೆದು ನೋಡುತ್ತಿಲ್ಲ.
ಇಲ್ಲಿ ರಾಜಕೀಯ ಗಣ್ಯೇರು ಇದ್ದೂ ಇಲ್ಲದಂತಾಗಿದೆ ಸಂಬಂಧ ಪಟ್ಟ ಅಧಿಕಾರಿಗಳು ಇದ್ದುಯಿಲ್ಲದಂತಾಗಿದೆ ಈ ಪರಿಸ್ಥಿತಿ ಯಾರಿಂದ ಯಾವಾಗ ಹೇಗೆ ಸರಿಯಾಗುತ್ತೋ ಎಂಬುದು ತಿಳಿಯದಂತಾಗಿದೆ ಸಾಯಿನಗರ್ ಕ್ರಾಸ್ ದಿಂದ ಮುಖ್ಯ ರಸ್ತೆಯ ಮೂಲಕ ಸಾಯಿನಗರ್ ಲಾಸ್ಟ್ ಸ್ಟಾಪ್ ಉಣಕಲ್ ಚರ್ಚ್ ವರೆಗೂ ಇರುವ ರಸ್ತೆಯನ್ನೊಮ್ಮೆ ನೋಡಿದರೆ ಯಾಕಾದರೂ ಈ ರಸ್ತೆಗೆ ಬರುತ್ತೇವೆಯೋ ಎಂಬ ಬೇಸರ ಉಂಟಾಗುತ್ತಿದೆ.
ಸಾಯಿನಗರ್ ಕ್ರಾಸ್ ದಿಂದ ಸಾಯಿನಗರ್ ಲಾಸ್ಟ್ ಸ್ಟಾಪ್ ವರೆಗೂ ಬರಬೇಕೆಂದರೆ ರಸ್ತೆಯ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ ಕೆಲ ಭಾಗದಲ್ಲಿ ರಸ್ತೆ ಹದಗೆಟ್ಟು ಹೋಗಿದೆ ಅಪಘಾತಕ್ಕೆ ಕಾಯುತ್ತಿವೆ ವಾಹನ ಸವಾರರಿಗೇ ತುಂಬಾ ಕಿರಿಕಿರಿ ಆಗುತ್ತಿದೆ ಅಷ್ಟೇ ಅಲ್ಲದೆ ಈ ಸಾಯಿನಗರ್ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಹುಬ್ಬಳ್ಳಿ ಸಿಟಿ ಬಸ್ ನಿಲ್ದಾಣದಿಂದ ಕೆ ಎಸ್ ಆರ್ ಟಿ ಸಿ ಸಂಚಾರಿ ವಾಹನಗಳು ಓಡಾಡುತ್ತವೆ. ದಿನನಿತ್ಯ ಸಾವಿರಾರು ಜನ ಇದೇ ರಸ್ತೆಯ ಮೂಲಕ ಕೆಲಸಕ್ಕೆ ನಗರ ಪ್ರದೇಶಕ್ಕೆ ಓಡಾಡುತ್ತಾರೆ ವೃದ್ಧರು ವಿದ್ಯಾರ್ಥಿಗಳೂ ಈ ರಸ್ತೆಯಲ್ಲಿ ಓಡಾಡಲು ಭಯಪಡುವ ಸ್ಥಿತಿ ಉಂಟಾಗುತ್ತಿದೆ ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿ ಸರಿಯಾದ ಸ್ವಚ್ಚತೆ ಇರುವುದಿಲ್ಲ ಸರಿಯಾದ ಚರಂಡಿ ವ್ಯವಸ್ಥೆಯೂ ಇರುವುದಿಲ್ಲ ರಸ್ತೆಯ ಅರ್ಧದಷ್ಟು ಕಳಚಿ ಹೋಗಿ ತಿಪ್ಪಿಗುಂಡಿಯಿಂದ ಕೂಡಿದೆ ಮಳೆಗಾಲದಲ್ಲಿ ದೇವರೇ ಗತಿ ಎಂಬಂತಾದರೂ ಕೂಡಾ ಯಾವ ಅಧಿಕಾರಿಗಳೂ ಗಮನ ಹರಿಸದೆ ನಿದ್ದೆ ಕಣ್ಣಿನಲ್ಲಿ ಕಣ್ಮುಚ್ಚಿ ಕುಳಿತಿದ್ದಾರೆ ಸ್ಥಳಿಯ ನಿವಾಸಿಗಳು ಇಂತಹ ಸಮಸ್ಯೆಗಳನ್ನೂ ಎದುರಿಸುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ನಿಜಕ್ಕೂ ವಿಪರ್ಯಾಸ.
ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಸಾಯಿನಗರ್ ಮತ್ತು ಉಣಕಲ್ ಭಾಗದ ನಿವಾಸಿಗಳಿಗೆ ಆಗುತ್ತಿರುವ ಅವ್ಯವಸ್ತೆಯನ್ನು ಪರಿಶೀಲಿಸಿ ಸರಿಯಾದ ಸ್ವಚ್ಛತೆ ಮತ್ತು ವ್ಯವಸ್ತೆ ಕಲ್ಪಿಸಿ ಕೊಡುತ್ತಾರಾ ಕಾದು ನೋಡಬೇಕಾಗಿದೆ