ಮೈಸೂರು ನಗರದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮೈಸೂರು ನಗರದ ಸಿ.ಸಿ.ಬಿ.ಘಟಕದ ಹೆಚ್ & ಬಿ ವಿಭಾಗದ ಪೊಲೀಸರು ಮತ್ತು ಸೆನ್ ಕ್ರೆöÊಂ ಪೊಲೀಸರು ದಿನಾಂಕ ೧೫/೧೦/೨೦೨೨ ರಂದು ಜಂಟಿಯಾಗಿ ಮೈಸೂರು ನಗರದ ಬೋಗಾದಿ, ಎಸ್.ಬಿ.ಎಂ ಬಡಾವಣೆ, “ಎ” ಬ್ಲಾಕ್ ಹರಿ ವಿದ್ಯಾಲಯ ಶಾಲೆ ಬಳಿ ಇರುವ ಮನೆಯೊಂದರೆ ಮೇಲೆ ದಾಳಿ ಮಾಡಿ, ೩ ಜನ ಆರೋಪಿಗಳನ್ನು ವಶಕ್ಕೆ ಪಡೆದು ಒಟ್ಟು ಸುಮಾರು ೧,೨೦,೦೦೦/-ರೂ ಮೌಲ್ಯ ಬೆಲೆ ಬಾಳುವ ೨೪ ಗ್ರಾಂ ತೂಕದ ಮಾದಕ ವಸ್ತು ಎಂ.ಡಿ.ಎಂ.ಎ., ತೂಕ ಮಾಡುವ ಎಲೆಕ್ಟ್ರಾನಿಕ್ ಯಂತ್ರ, ೨ ದ್ವಿಚಕ್ರವಾಹನ, ೨ ಲ್ಯಾಪ್‌ಟಾಪ್ ಹಾಗೂ ೫ ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಸೆನ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿತರು ಮೈಸೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನಲ್ಲಿ ವಾಸವಿರುವ ಕೇರಳ ಮೂಲದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕವಸ್ತು ಎಂ.ಡಿ.ಎಂ.ಎ.ಅನ್ನು ಖರೀದಿಸಿ ತಂದು ಮೈಸೂರು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆಂದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ., ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗರವರಾದ ಶ್ರೀಮತಿ ಗೀತ. ಎಂ.ಎಸ್., ಐ.ಪಿ.ಎಸ್.ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಎ.ಸಿ.ಪಿ.ರವರಾದ ಶ್ರೀ ಸಿ.ಕೆ.ಅಶ್ವತ್ಥನಾರಾಯಣರವರ ನೇತೃತ್ವದಲ್ಲಿ ಸಿ.ಸಿ.ಬಿ. ಘಟಕದ ಹೆಚ್&ಬಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್‌ರವರಾದ ಶ್ರೀ ಜಿ.ಶೇಖರ್, ಸೆನ್ ಕ್ರೆöÊ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ರವರಾದ ಶ್ರೀ ಜಯಕುಮಾರ್ ಸಿಬ್ಬಂದಿಗಳಾದ ಸಲೀಂಖಾನ್, ಲಕ್ಷ್ಮೀಕಾಂತ.ಪಿಎನ್, ಪ್ರಕಾಶ್.ಟಿ ಹಾಗೂ ಸೆನ್ ಕ್ರೆöÊ ಪೊಲೀಸ್ ಠಾಣೆಯ ಸಿಬ್ಬಂದಿರವರುಗಳು ನಡೆಸಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.

error: Content is protected !!