ಓಡಿಶಾ ಕಟಕ್: ಸಾಲ ನೀಡಿದ ಇಬ್ಬರು ಯುವಕರು ಸಾಲ ಮರುಪಾವತಿಸದ ಕಾರಣಕ್ಕೆ ಸಾಲ ಪಡೆದ ವ್ಯಕ್ತಿಯನ್ನು ಬೈಕ್ ನ ಹಿಂಬದಿಗೆ ಕಟ್ಟಿ ಓಡಿಸಿಕೊಂಡು ಬರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಘಟನೆ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಪ್ರಕರಣ ಸಂಬಂಧ ಒಡಿಶಾ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು.
ಹುಸೇನ್ (24) ಹಾಗು ಚೋಟು (18) ಬಂಧಿತ ಆರೋಪಿಗಳು.
ಘಟನೆಯಲ್ಲಿ, ಸಾಲ ಪಡೆದ ವ್ಯಕ್ತಿ ಸಾಲ ಮರುಪಾವತಿಸದೆ ಸತಾಯಿಸುತ್ತಿದ್ದನು ಇದರಿಂದ ಆರೋಪಿಗಳು ಯುವಕನನ್ನು ಸ್ಕೂಟಿಗೆ ಕಟ್ಟಿ ರಸ್ತೆಯಲ್ಲಿ ಓಡುವಂತೆ ಮಾಡಿದ್ದಾರೆ ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಕಟಕ್ ನ ಡಿಸಿಪಿ ಮಾಹಿತಿ ತಿಳಿಸಿದ್ದಾರೆ.