ಕಾಸರಗೋಡು: ಬಿ ಎಸ್ ಎನ್ ಎಲ್ ನ ಕೇಬಲ್ ಕಳವು ಗೈದ ಐವರು ಅಸ್ಸಾಂ ನಿವಾಸಿಗಳನ್ನು ಚಿಮೇನಿ ಪೊಲೀಸರು ಬಂಧಿಸಿದ್ದಾರೆ. ಇವರು ಕಳವು ಗೈದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಕೇಬಲ್ ನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.
ರಸೂಲ್ ಹಸನ್, ಮಜಿದುಲ್ ಇಸ್ಲಾಂ, ಪೂಲ್ ಬಾರ್ ಅಲಿ, ಶರೀಫುಲ್, ಮುಹಮ್ಮದ್ ರೂಬಿ ಉಲ್ ಇಸ್ಲಾಂ ಬಂಧಿತರು.
ವಾಹನ ತಪಾಸಣೆ ನಡೆಸುತ್ತಿ ದ್ದಾಗ ಪೊಲೀಸರನ್ನು ಕಂಡು ವಾಹನ ನಿಲ್ಲಿಸದೆ ಪರಾರಿಯಾಗಿದ್ದು, ಸಂಶಯ ಗೊಂಡು ಪೊಲೀಸರು ಬೆನ್ನಟ್ಟಿ ಹಿಡಿಯುವಲ್ಲಿ ಯಶ್ವಿಯಾಗಿದ್ದು ತಪಾ ಸಣೆ ನಡೆಸಿದಾಗ ಕೇಬಲ್ ಪತ್ತೆಯಾಗಿದೆ