ಮೈಸೂರಿನಿಂದ ತಮ್ಮ ಸ್ವಗ್ರಾಮಕ್ಕೆ ಗರ್ಭಿಣಿ ಮಹಿಳೆ ಛಾಯಾದೇವಿ ಹಾಗೂ ಕಾರ್ತಿಕ್ ಎಂಬುವವರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ತರಿಪುರ ಸಮೀಪದ ರಸ್ತೆಯಲ್ಲಿ ಅಧಿಕವಾದ ಗುಂಡಿಗಳಿದ್ದು ಸಂಪೂರ್ಣ ರಸ್ತೆ ಹದಗೆಟ್ಟ ಪರಿಣಾಮ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕಾರ್ತಿಕ್ ಹಾಗೂ ಗರ್ಭಿಣಿ ಮಹಿಳೆ ಛಾಯಾದೇವಿ ತೀವ್ರವಾಗಿ ಗಾಯಗೊಂಡಿರುತ್ತಾರೆ.
ಛಾಯಾದೇವಿ ತೀವ್ರವಾಗಿ ಗಾಯಗೊಂಡಿದ್ದ ಪರಿಣಾಮ ಮೃತಪಟ್ಟಿರುತ್ತಾರೆ.
ತರಿಪುರ ಮತ್ತು ಮಹಾದೇವಪುರ ಮಾರ್ಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಈ ವಿಚಾರವಾಗಿ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು ಸಹ ರಸ್ತೆ ದುರಸ್ತಿಗೆ ಯಾರೊಬ್ಬರೂ ಮುಂದಾಗಿರುವುದಿಲ್ಲ.
ಹದಗೆಟ್ಟಿರುವ ರಸ್ತೆಯಿಂದ ಗರ್ಭಿಣಿಯೊಬ್ಬಳು ಸಾವನ್ನಪ್ಪಿರುವ ಕುರಿತು, ಇದಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು. ಈ ಕುರಿತು ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.