ಐವರು ಸೇರಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
‘ಘಟನೆ ನಡೆಯುವುದಕ್ಕೂ ಒಂದು ದಿನ ಮೊದಲು ನಾನು ನನ್ನ ಸಹೋದರನ ಹುಟ್ಟುಹಬ್ಬದ ಆಚರಣೆಗಾಗಿ ಗುರುಗ್ರಾಮಕ್ಕೆ ಹೋಗಿದ್ದೆ. ಆಚರಣೆ ಮುಗಿದ ಮೇಲೆ, ಬಸ್ ನಿಲ್ದಾಣದ ವರೆಗೂ ನನ್ನ ಸಹೋದರ ಬಿಟ್ಟು ಹೋದ. ಅಲ್ಲಿಂದ ನನಗೆ ಗೊತ್ತಿರುವವರೇ ಎಲ್ಲಿಗೋ ಕರೆದುಕೊಂಡು ಹೋದರು’ ಎಂದು ಸಂತ್ರಸ್ತ ಮಹಿಳೆಯು ಹೇಳಿಕೆ ನೀಡಿದ್ದಾರೆ ಎಂದು ನಿಪುನ್ ಅಗರ್ವಾಲ್ ತಿಳಿಸಿದರು.
‘ಮಹಿಳೆಯೊಬ್ಬರು ಆಶ್ರಮ್ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದಾರೆ ಎಂದು ನಂದ್‌ಗ್ರಾಮ್ ಠಾಣೆಯ ತುರ್ತು ಸಂಖ್ಯೆಗೆ ಮಂಗಳವಾರ (ಅ.18) ಬೆಳಿಗ್ಗೆ 3.30ರ ಸುಮಾರಿಗೆ ಕರೆ ಬಂತು. ನಂತರ ಮಹಿಳೆಯನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಿದ್ದೇವೆ’ ಎಂದು ಗಾಜಿಯಬಾದ್‌ನ ಪೊಲೀಸ್ ವರಿಷ್ಠಾಧಿಕಾರಿ ನಿಪುನ್ ಅಗರ್ವಾಲ್ ಮಾಹಿತಿ ನೀಡಿದರು.
‘ಈ ವೇಳೆ ಸರ್ಕಾರಿ ಆಸ್ಪತ್ರೆಗೆ ಬೇಡ, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಎಂದು ಸಂತ್ರಸ್ತ ಮಹಿಳೆಯು ಹೇಳಿದ್ದರಿಂದ ಗುರು ತೇಜ್ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದರು.
ಐವರಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಬುಧವಾರ ಹೇಳಿದರು.
‘ಮಹಿಳೆಯ ಕೈ-ಕಾಲುಗಳನ್ನು ಕಟ್ಟಿ, ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡನ್ನು ತುರುಕಿ, ಆಕೆಯನ್ನು ಗೋಣಿಚೀಲದಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾರೆ’ ಎಂದು ದೆಹಲಿ ಮಹಿಳಾ ಆಯೋಗ ಆರೋಪಿಸಿದೆ. ಘಟನೆಯನ್ನು ಆಯೋಗ ಖಂಡಿಸಿದೆ. ಈ ಸಂಬಂಧ ಗಾಜಿಯಬಾದ್ ಪೊಲೀಸರಿಗೆ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲೀವಾಲ್ ನೋಟಿಸ್ ನೀಡಿದ್ದಾರೆ.
‘ಅ.16 (ಭಾನುವಾರ) ತನ್ನ ಸಹೋದರನ ಹುಟ್ಟುಹಬ್ಬದ ಆಚರಣೆಗೆ ತೆರಳಲು ಗಾಜಿಯಬಾದ್‌ನಲ್ಲಿ ಆಟೊರಿಕ್ಷಾಗಾಗಿ ಮಹಿಳೆ ಕಾಯುತ್ತಿದ್ದರು. ಈ ವೇಳೆ ಎಸ್‌ಯವಿಯಲ್ಲಿ ಬಂದ ನಾಲ್ವರು ಆರೋಪಿಗಳು, ಆಕೆಯನ್ನು ಅಪಹರಿಸಿದ್ದಾರೆ. ಈ ನಾಲ್ವರು ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ’ ಎಂದು ಮಹಿಳಾ ಆಯೋಗವು ಗಂಭೀರ ಆರೋಪ ಮಾಡಿದೆ.
‘ಮಹಿಳೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ’ ಎಂದು ದೆಹಲಿ ಮಹಿಳಾ ಆಯೋಗ ಹೇಳಿದೆ. ಆದರೆ, ‘ಮಂಗಳವಾರ ಬೆಳಿಗ್ಗೆ ಮಹಿಳೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಮಹಿಳೆ ಸ್ಥಿತಿ ಸ್ಥಿರವಾಗಿದೆ. ಆಕೆಗೆ ಯಾವುದೇ ರೀತಿ ಆಂತರಿಕ ಗಾಯಗಳಾಗಿರುವುದು ಕಂಡುಬಂದಿಲ್ಲ’ ಎಂದು ಗುರು ತೇಜ್ ಬಹದ್ದೂರ್ ಆಸ್ಪತ್ರೆಯಮಾಧ್ಯಮ ವಕ್ತಾರ ಡಾ. ರಜತ್ ಜಾಂಬಾ ತಿಳಿಸಿದ್ದಾರೆ.
ಆದರೆ, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ಕುರುಹುಗಳಿವೆ. ಜೊತೆಗೆ ಆಕೆಯ ದೇಹದೊಳಗೆ ವಸ್ತುವೊಂದು ಪತ್ತೆಯಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.