ಮನೆಯ ಕೋಳಿ ಗೂಡಿನ ಚಪ್ಪರದಲ್ಲಿ ಅನಧಿಕೃತ ವಾಗಿ 1010ರೂ ಮೌಲ್ಯದ 36ಗ್ರಾಂ ಒಣ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಕೇಶವ ವಾಸುದೇವ ಗೌಡ ಸಂಗ್ರಹಿಸಿಟ್ಟಿದ್ದನು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ಶಿರಸಿ ತಾಲೂಕಿನ ಮರಿಗುಂಡಿಯಲ್ಲಿ ನಡೆದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.