ರಾಯಚೂರು ತಾಲ್ಲೂಕಿನ ಏಗನೂರು ಅನ್ನೊ ಗ್ರಾಮದಲ್ಲಿ ಪತ್ನಿಯನ್ನು ಹತ್ಯೆ ಮಾಡಿದ್ದ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ ಶಶಿಕುಮಾರ್ ಹಾಗೂ ಪಲ್ಲವಿ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ರು..ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಮೊದಲು ಇದೇ ಏಗನೂರು ಗ್ರಾಮದಲ್ಲಿ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿ ಸ್ವಲ್ಪ ದಿನ ಕೆಲಸ ಮಾಡಿದ್ರು. ಬಳಿಕ ಆಕೆಗೆ ಇದೇ ರಾಯಚೂರು ತಾಲ್ಲೂಕಿನ ಸಂಕನೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯಾಗಿ ಪ್ರಮೋಷನ್ ಆಗಿತ್ತು.
ಇದಾದ ಬಳಿಕ ಆಕೆ ವ್ಯಕ್ತಿಯೊಬ್ಬನ ಜೊತೆ ಅನೈತ್ತಿಕ ಸಂಬಂಧ ಹೊಂದಿದ್ಲಂತೆ. ಫೋನ್ ನಲ್ಲಿ ಗಂಟೆಗಟ್ಟಲೇ ಮಾತನಾಡೋದು, ಎಲ್ಲೆಂದರಲ್ಲಿ ಓಡಾಡೊದು, ಅಷ್ಟೇ ಅಲ್ಲ, ಆಕೆ ಬೇರೊಬ್ಬನ ಜೊತೆ ಇರೋದನ್ನ ಖುದ್ದು ಆರೋಪಿ ಪತಿ ಶಶಿಕುಮಾರ್ ನೋಡಿದ್ದನಂತೆ. ಆದ್ರೂ ಆತ ದೃತಿಗೆಡದೇ ಪತ್ನಿಗೆ ತಿಳಿಹೇಳಿದ್ದ. ಇದಾದ ಬಳಿಕವೂ ಆಕೆ ತನ್ನ ಚಾಳಿ ಮುಂದುವರೆಸಿದ್ಲಂತೆ.
ಇದಾದ ನಂತರ ಶಶಿಕುಮಾರ್ ಕುಡಿದು ಪತ್ನಿಗೆ ಕಿರುಕುಳ ಕೊಡಲು ಶುರುಮಾಡಿದ್ದ..ಇದೇ ಕಾರಣಕ್ಕೆ ಆಕೆ ಹತ್ಯೆಯಾಗಿರೊ ಹಿಂದಿನ ದಿನ ಮಹಿಳಾ ಠಾಣೆಗೆ ಹೋಗಿದ್ದಳು. ಆಗ ಪೊಲೀಸರು ಶಶಿಕುಮಾರ್​ಗೆ ಕರೆ ಮಾಡಿ, ವಾರ್ನ್​ ಸಹ ಮಾಡಿದ್ರು.. ಆದ್ರೆ ಅದೇ ಆಕೆ ಮತ್ತೆ ಆ ವ್ಯಕ್ತಿ ಜೊತೆ ಇದ್ದದ್ದನ್ನ ಪತಿ ಶಶಿಕುಮಾರ್​ ನೋಡಿದ್ದನಂತೆ. ಅದೇ ಕೋಪಕ್ಕೆ ಮಾರನೇ ದಿನ ಪತ್ನಿ ಕೈಗೆ ಸಿಕ್ಕಾಗ ಕೊಡಲಿಯಿಂದ ಹತ್ಯೆಗೈದಿದ್ದಿನಿ ಅಂತ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ.
ಸದ್ಯ ರಾಯಚೂರು ಗ್ರಾಮೀಣ ಪೊಲೀಸರು ಆರೋಪಿ ಶಶಿಕುಮಾರ್​​ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

error: Content is protected !!