ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಪುಟ್ಟನ ಮನೆಯ ಬೆಟ್ಟದಲ್ಲಿ ಮದ್ಯಾಹ್ನ 12.10 ಗಂಟೆ ಸಮಯದಲ್ಲಿ ಜೂಜಾಡುತ್ತುರುವ ವಿಷಯ ತಿಳಿದ ಕೂಡಲೇ ಶಿರಸಿ ಪೊಲೀಸ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಜೂಜಾಡುತ್ತಿರುವ 7 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಳಿದ ನಾಲ್ವರು ಕಣ್ಣು ತಪ್ಪಿಸಿ ಪರಾರಿಯಾಗಿದ್ದರೆ.
ಈ ಆರೋಪಿಗಳು ಜೂಜಾಟಕ್ಕೆ ಬಳಸಿದ್ದ ₹ 1.50.200, ಮಾರುತಿ ಸ್ವಿಫ್ಟ್ ಕಾರು ಹಾಗೂ ಮಹೀಂದ್ರ ಬೊಲೆರೋ ಗಾಡಿಯನ್ನು ಪೋಲಿಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಇಸ್ಪೀಟ್ ಆಡುತ್ತಿರುವ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪಾಲ್ಗೊಂಡ ಮಾನ್ಯ ಪೋಲಿಸ್ ಅಧೀಕ್ಷಕರು ಶ್ರೀಮತಿ ಸುಮನ್ ಡಿ ಪನ್ನೆಕರ್. ಮಾನ್ಯ ಹೆಚ್ಚುವರಿ ಅಧೀಕ್ಷಕರಾದ ಶ್ರೀ ಬದರಿನಾಥ ಎಸ್ . ಶಿರಸಿಯ ಮಾನ್ಯ ಪೋಲಿಸ್ ಉಪಧೀಕ್ಷಕರಾದ ಶ್ರೀ ರವಿ ಡಿ. ನಾಯ್ಕ. ಶಿರಸಿಯ ವೃತ್ತ ನಿರಕ್ಷಕರಾದ ಶ್ರೀ. ರಾಮಚಂದ್ರ ನಾಯಕ ರವರ ಮಾರ್ಗದರ್ಶನದಲ್ಲಿ ಹಾಗೂ ಉಳಿದ ಪೋಲಿಸ್ ಅಧಿಕಾರಿ ಸಿಬ್ಬಂದಿಗಳು ಸೇರಿ ಜೂಜಾಡುತ್ತಿರುವ ಆರೋಪಿಗಳನ್ನು ಬೇಟೆಯಾಡಿ ವಶಕ್ಕೆ ಪಡೆದು ಕೊಂಡಿದ್ದಾರೆ.
ವರದಿ :ಶ್ರೀಪಾದ್ ಹೆಗಡೆ