60 ವರ್ಷದ ನಂತರ ಇತ್ತೀಚೆಗಷ್ಟೇ ಮೊದಲ ಬಾರಿ ಸ್ನಾನ ಮಾಡಿದ್ದ ವಿಶ್ವದ ಅತ್ಯಂತ ಕೊಳಕು ವ್ಯಕ್ತಿ ಖ್ಯಾತರಾಗಿದ್ದ 94 ವರ್ಷದ ನಿಧನರಾಗಿದ್ದಾರೆ.
ಇರಾನ್‌ ಪ್ರಜೆಯಾಗಿರುವ ಅಮೌ ಹಾಜಿ 60 ವರ್ಷದಿಂದ ಸ್ನಾನವೇ ಮಾಡಿರಲಿಲ್ಲ. ಸ್ನಾನ ಮಾಡದೇ ಇರುವುದರಿಂದಲೇ ನಾನು ಇಷ್ಟು ವರ್ಷ ಜೀವಿಸಿದ್ದೇನೆ ಎಂದು ನಂಬಿದ್ದರು.
ಇರಾನ್‌ ನ ಬರಪೀಡಿತ ಪ್ರದೇಶದ ಸಮೀಪವಿರುವ ಡೆಜಾಘ್‌ ಗ್ರಾಮದ ಸಣ್ಣ ಕೋಣೆಯಲ್ಲಿ ವಾಸವಾಗಿದ್ದ ಅಮೌ ಹಾಜಿ, ಹೊದ್ದುಕೊಳ್ಳಲು ಒಂದು ಬೆಡ್‌ ಶೀಟ್‌ ಮಾತ್ರ ಹೊಂದಿದ್ದರು. 60 ವರ್ಷದಿಂದ ಸ್ನಾನ ಮಾಡದೇ ಸೋಪು ಕೂಡ ಬಳಸದೇ ಜೀವಿಸಿದ್ದ ಅವರು, ಇತ್ತೀಚೆಗಷ್ಟೇ ಮೊದಲ ಬಾರಿ ಸ್ನಾನ ಮಾಡಿದ್ದರು.
ಹಳೆಯ ಎಣ್ಣೆಯ ಬಾಟಲಿಯಲ್ಲಿ ತುಂಬಿದ ಕೊಳಕು ನೀರು ಹಾಗೂ ಕೊಳೆತ ಮಾಂಸವನ್ನು ಸೇವಿಸುತ್ತಿದ್ದರು. ಇತ್ತೀಚೆಗಷ್ಟೇ ಗ್ರಾಮಸ್ಥರು ಬಲವಂತದಿಂದ ಸ್ನಾನ ಮಾಡಿಸಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

error: Content is protected !!