ಭಾರಿ ಗಾತ್ರದ ಹೆಬ್ಬಾವು ಒಂದು 54 ವರ್ಷ ಮಹಿಳೆಯೊಬ್ಬಳನ್ನು ಜೀವಂತವಾಗಿ ನುಂಗಿರುವ ಭಯಾನಕ ಘಟನೆ ಇಂಡೋನೇಷ್ಯಾದಲ್ಲಿ ನಡೆದಿರುವುದಾಗಿ ಮಂಗಳವಾರ ವರದಿಯಾಗಿದೆ.
ಮೃತ ಮಹಿಳೆಯನ್ನು ಜಹ್ರಾಹ್ (54) ಎಂದು ಗುರುತಿಸಲಾಗಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆಯಾದಾಗ, ಆಕೆಯನ್ನು ಕುಟುಂಬಸ್ಥರು ಹುಡುಕಲು ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಜಹ್ರಾಹ್ ಶುಕ್ರವಾರ ಜಾಂಬಿ ಪ್ರಾಂತ್ಯದ ತೋಟದಲ್ಲಿ ರಬ್ಬರ್​ ಸಂಗ್ರಹಿಸುವಾಗ ನಾಪತ್ತೆಯಾಗಿದ್ದರು. ತುಂಬಾ ಹೊತ್ತಾದರೂ ಜಹ್ರಾಹ್ ಮನೆಗೆ ಬಾರದಿದ್ದಾಗ, ಚಿಂತೆಗೀಡಾದ ಕುಟುಂಬ, ಹುಡುಕಲು ಮುಂದಾದರು. ಎರಡು ದಿನಗಳ ಬಳಿಕ ಅವರ ಕಣ್ಣಿಗೆ ಹೊಟ್ಟೆ 22 ಅಡಿ ಉದ್ದದ ಒಂದು ಬೃಹತ್​ ಹೆಬ್ಬಾವು ಕಣ್ಣಿಗೆ ಬಿದ್ದಿತು. ಗಾಬರಿಗೊಂಡ ಸ್ಥಳೀಯರು ಅದರ ಹೊಟ್ಟೆಯಲ್ಲಿ ದೊಡ್ಡ ಉಬ್ಬುವಿಕೆಯನ್ನು ಗಮನಿಸಿದರು ಮತ್ತು ಹೊಟ್ಟೆಯನ್ನು ಸೀಳಿದಾಗ ಒಳಗೆ ಜಹ್ರಾಹ್​ ಮೃತದೇಹ ಪತ್ತೆಯಾಗಿದೆ.
ಇದಾದ ಬಳಿಕ ಆಕ್ರೋಶಗೊಂಡ ಸ್ಥಳೀಯರು ಹೆಬ್ಬಾವಿನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

error: Content is protected !!