ಧಾರವಾಡ ಜಿಲ್ಲೆಯ ಬಹುತೇಕ ಹಳ್ಳಿಗಳ ರಸ್ತೆಗಳು ಹಳ್ಳ ಕೂಡಿರುವುದು ಬೆಸರದ ಸಂಗತಿ. ಇಂತಹದೊಂದು ದುರ್ಗತಿಗೆ ಕೈಗನ್ನಡಿಯಾಗಿರುವ ರಸ್ತೆ ಇದು .ಜಿಲ್ಲೆಯ ತಲವಾಯಿ ರಾಯರ ಹೇಬ್ಬಳ್ಳಿ ರಾಜ್ಯಹೇದ್ದಾರಿ ಪಿ.ಡಬ್ಲೂ.ಡಿ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥವಾಗಿ ಬಿದ್ದಿದೆ. ಇದು ಅಮ್ಮಿನಬಾವಿಯಿಂದ ಚಂದನಮಟ್ಟಿ ಕನಕೂರ ತಲವಾಯಿ ಹೇಬ್ಬಳಿ ವಾಯಾ ಶಿವಳ್ಳಿ ಯವರೆಗೆ ಸುಮಾರು 14 ಕಿಲೋಮಿಟರ ರಸ್ತೆ.

ವಾಜಪೆಯ ಪ್ರಧಾನಮಂತ್ರಿಅವದಿಯಲ್ಲಿ ಕೆಂದ್ರ ಸರ್ಕಾರದ ಅನುಧಾನದಲ್ಲಿ ಈ ರಸ್ತೆ ಕಾಮಗಾರಿಯಾಗಿದ್ದು ಬಿಟ್ಟರೆ ಇಲ್ಲಿಯವರೆಗೆ ಯಾರು ತಿರುಗಿ ನೊಡಿಲ್ಲ. ಕಳೆದ ತಿಂಗಳಲ್ಲಿ ಬಾರಿ ಪ್ರಮಾಣದ ಮಳೆಯಿಂದಾಗಿ ರಸ್ತೆಗಳು ಧಾರುಣ ಸ್ಥಿತಿ ಕಂಡಿದೆ. ಮೆಲಾಗಿ ಇದಕ್ಕೆಲ್ಲಾ ಕಾರಣ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯವೂ ಕೂಡಾ ಇದೆ .ಧಾರವಾಡ ದಿಂದ ಪಾರ್ಮ, ಗೊಂಗಡಿಕೊಪ್ಪ , ಗೋವನಕೊಪ್ಪ, ಸೋಮಾಪೂರ , ಮಾರಡಗಿ, ಹೇಬ್ಬಳ್ಳಿ , ವನಹಳ್ಳಿ ,ಮಾರ್ಗವಾಗಿ ಮರಬ ತಲುಪುವ ಹಳ್ಳ ಇದು ಇದರ ಮುಖಾಂತರ ಬಾರಿ ಪ್ರಮಾಣದ ನೀರು ಹರಿದು ಬಂದು ಇದಕ್ಕೆಲ್ಲ ಕಾರಣ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಸದೆ ಇರುವುದೆ ಕಾರಣ .ಸರಿಯಾದ ರೀತಿಯಲ್ಲಿ ಹುಳ್ಳ ಎತ್ತದೆ ಹಳ್ಳವೆಲ್ಲಾ ಹುಗಿದು ಗಿಡ ಮರಗಳು ಬೆಳೆದು ಸಮತಟ್ಟವಾಗಿರುವುದರಿಂದ ನೀರು ಸರಿಯಾಗಿ ಹಳ್ಳದ ಮುಖಾಂತರ ಹೊಗದೆ ರಸ್ತೆಗಳ ಮೆಲೆ ಹರಿದು ಹೊಗಿ ಈ ತರಹ ರಸ್ತೆಗಳು ನೀರಿನ ರಬಸಕ್ಕೆ ಕಿತ್ತುಹೋಗಿ,ರೈತರ ಹೊಲಗಳಲ್ಲಿ ಹರಿದು ಬಾರಿ ಪ್ರಮಾಣದ ನಷ್ಟತೆಗಳು ಉಂಟಾಗಿವೆ. ಇಷ್ಟಾದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಿರುಗಿ ನೊಡಿಲ್ಲ.

ಮೆಲಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಉಣಕಲ್ ಕೆರೆಗೆ ಟಿಪ್ಪರಗಳ ಮುಖಾಂತರಮಣ್ಣು ಸಾಗಿಸುತ್ತಿದ್ದು ಸರಿಸುಮಾರು 20ರಿಂದ 30. ಟನ್ ಬಾರವನ್ನು ಹೊತ್ತು ಸಾಗುವ ಟಿಪ್ಪರಗಳು ಅಮ್ಮಿನಬಾವಿಯಿಂದ ಇದೆ ಮಾರ್ಗವಾಗಿ ಹೊಗುತ್ತಿವೆ. ಅವರುಗಳು ಅಮ್ಮಿನಬಾವಿಯಿಂದ ಅಮರಗೋಳ ಮಾರ್ಗವಾಗಿ ಹೊಗಬೆಕಾದ ಬಾರಿ ವಾಹನಗಳು ಟೋಲ್ ಪೈಂಟ ತಪ್ಪಿಸುವ ಉದ್ದೇಶದಿಂದ ಇವರುಗಳು ಈ ಒಳಮಾರ್ಗವಾಗಿ ಸಂಚಾರಮಾಡುತ್ತಾರೆ ಅದರಿಂದ ಮತ್ತಷ್ಟು ರಸ್ತೆಗಳು ಹದಗೆಟ್ಟು ಹೊಗುತ್ತಿವೆ. ಆದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಸಿ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ಸರಿಪಡಿಸಬೆಕು.
ವರದಿ: ಚರಂತಯ್ಯ ಹಿರೇಮಠ.

1 thought on “ಅಧಿಕಾರಿಗಳ ನಿರ್ಲಕ್ಷ್ಯದಿಂದ ಹದಗೆಟ್ಟ ರಸ್ತೆಗಳು.

Comments are closed.

error: Content is protected !!