ಇತ್ತೀಚಿನ ದಿನಗಳಲ್ಲಿ ಮದ್ಯೆಮ ವರ್ಗದ ಮಹಿಳೆಯರು ಹೊರಗಡೆ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗುತ್ತಿರುವುದು ನಿಜಕ್ಕೂ ವಿಪರ್ಯಾಸ…..
ಯಾಕೇ ಅಂತೀರಾ ಇಲ್ಲಿದೆ ನೋಡಿ……
ಛೋಟಾ ಮುಂಬೈ, ಹುಬ್ಬಳ್ಳಿ ಎಂಬ ಸುಪ್ರಸಿದ್ದ ನಗರ ಪ್ರದೇಶದ ಹಳೇ ಹುಬ್ಬಳ್ಳಿಯ ಬುಕ್ ಫ್ಯಾಕ್ಟರಿಯಲ್ಲಿ ದಿನನಿತ್ಯ ತಾನಾಯ್ತು ತನ್ನ ಕೆಲಸವಾಯಿತು ಎಂದು ಕೆಲಸ ಮಾಡಿಕೊಂಡಿದ್ದ 36 ವರ್ಷದ ಮಹಿಳೆಯ ಮೇಲೆ ಈ ಜನ ಕಾಮುಕರು ಹಾಡ ಹಗಲೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಹುಬ್ಬಳ್ಳಿಯ ಉದ್ಯೇಮನಗರದಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ ಮದ್ಯಾಹ್ನ ಹೊರಗಡೆ ಬಂದು ಊಟ ಮಾಡಿಕೊಂಡು ಮರಳಿ ಫ್ಯಾಕ್ಟರಿ ಕೆಲಸಕ್ಕೆ ಹಿಂತಿರುಗುವಾಗ ಅಲ್ಲಿಯೇ ಸ್ಥಳೀಯ ನಿವಾಸಿಗಳಾದ 1) ಉಲ್ಪಥ್ ಅಲಿಯಾಸ್ ನಾಮ್ 2) ಮಲ್ಲಿಕ್ 3) ಮುಬಾರಕ್ ಅಲಿಯಾಸ್ ಟುಬೋ ಎಂಬ 3 ಜನ ಕಾಮುಕರು ಹಾಡ ಹಗಲೇ ಮಹಿಳೆಯನ್ನು ಎಳೆದಾಡಿ ತಮ್ಮ ಕಾಮತೃಷೆಗೋಸ್ಕರ ಅತ್ಯಾಚಾರಕ್ಕೆ ದಾಳಿ ಮಾಡಿದಾಗ ಅಸಹಾಯಕ ಮಹಿಳೆ ಭಯದಿಂದ ಜೋರಾಗಿ ಕಿರುಚಾಡಿದ್ದಾಳೆ. ಮಹಿಳೆ ಕಿರುಚಾಡಿದ್ದನ್ನು ಗಮನಿಸಿದ ಸ್ಥಳೀಯರು ಮತ್ತು ಮಹಿಳೆಯ ಜೊತೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಬರುವಷ್ಟರಲ್ಲಿ ಕಾಮುಕರು ಅಲ್ಲಿಂದ ಪರಾರಿಯಾಗಿದ್ದರು. ಕೂಡಲೇ ಮಹಿಳೆ ಏನೂ ಮಾಡುವುದು ಎಂದು ತಿಳಿಯದೇ ಭಯದಿಂದ ನೇರವಾಗಿ ಹುಬ್ಬಳ್ಳಿಯ ಕಸಬಾ ಪೇಟ್ ಪೊಲೀಸ್ ಠಾಣೆಗೆ ಹೋಗಿ ಘಟನೆಯ ಮಾಹಿತಿಯನ್ನು ತಿಳಿಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಕಸಬಾಪೇಟ್ ಪೊಲೀಸ್ ಠಾಣೆಯ ಸಿಪಿಐ
ಶ್ರೀ ಏ ಎಮ್ ಬನ್ನಿ ರವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿ ಅಧಿಕಾರಿಗಳ ಮಾರ್ಗದರ್ಶನದಂತೆ ಘಟನೆ ನಡೆದ ಕೆಲವೇ ಘಂಟೆಗಳಲ್ಲಿ 3 ಜನ ಕಾಮುಕರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ…..
ವರದಿ : ಶಿವ ಹುಬ್ಬಳ್ಳಿ.