79ರ ವಯಸ್ಸಿನ ವೃದ್ಧನಿಗೆ ಹನಿ ಟ್ರ್ಯಾಪ್ ಮಾಡಲು ಮಧ್ಯಮ ವಯಸ್ಸಿನ ಮಹಿಳೆ ಮುಂದಾಗಿರುವ ಘಟನೆ ಕೆಟಿಜಿನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.
79ರ ವಯಸ್ಸಿನ ವೃದ್ಧನಾದ ಶಿವಕುಮಾರ್ನ ಬಳಿ ಯಶೋದ ಎಂಬ ಮಹಿಳೆ ಕಷ್ಟವಿದೆ ಎಂದು ಹೇಳಿ 85,000ಗಳನ್ನು ಹಣ ಪಡೆದಿರುತ್ತಾಳೆ. ಹಣ ಹಿಂತಿರುಗಿಸಬೇಕಾದಂತಹ ಗಡವು ಮುಗಿದ ನಂತರವೂ ಸಹ ಹಣ ಹಿಂತಿರುಗಿಸಿರುವುದಿಲ್ಲ.
ಇದೇ ವಿಚಾರವಾಗಿ ಶಿವಕುಮಾರ್ ಯಶೋದಾಳ ಬಳಿ ಪದೇಪದೇ ಸಾಲ ಮರುಪಾವತಿಸಲು ಕೇಳಿರುತ್ತಾರೆ.
ಇದರಿಂದ ತಪ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಯಶೋಧ ವೃದ್ಧನ ಮೇಲೆ ಹನಿ ಟ್ರ್ಯಾಪ್ ಮಾಡಲು ಮುಂದಾಗಿದ್ದಾಳೆ.
ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಯಶೋಧ ವಾಸವಿದ್ದು ಸಾಲ ಹಿಂದಿರುಗಿಸುವುದಾಗಿ ಹೇಳಿ ಶಿವಕುಮಾರನನು ಮನೆಗೆ ಕರೆಸಿಕೊಂಡಿರುತ್ತಾಳೆ.
ಮನೆಗೆ ಬಂದ ಶಿವಕುಮಾರ ನಿಗೆ ಜ್ಯೂಸ್ ನಲ್ಲಿ ಆಮೇಲೆ ಬರುವ ಔಷಧಿಯನ್ನು ಹಾಕಿ ಆತನನ್ನು ಬೆತ್ತಲೆ ಮಾಡಿ ಫೋಟೋಗಳನ್ನು ಕ್ಲಿಕ್ಕಿಸಿರುತ್ತಾಳೆ.
ಇದೇ ಚಿತ್ರಗಳನ್ನು ಇಟ್ಟುಕೊಂಡು ನಂತರ ವೃದ್ಧನ ಬಳಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ.
ಆತಂಕಗೊಂಡ ವೃದ್ಧ ಕೆಟೀಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಯಶೋದಾಳನ್ನು ಬಂಧಿಸಿದ್ದಾರೆ.
ಕೊಟ್ಟ ಸಾಲವನ್ನು ಹಿಂದಿರುಗಿಸದೆ ಹನಿ ಟ್ರ್ಯಾಪ್ ನ ಮೂಲಕ ಸಾಕಷ್ಟು ಹಣ ಮಾಡುವ ಆಸೆಗೆ ಬಿದ್ದ ಆಂಟಿ ಈಗ ಕಂಬಿಯಿಂದ.