ಮುಂಡಗೋಡ: ತಾಲೂಕಿನ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಪಡೆಯಲು ಹಾಗೂ ನಿಮ್ಮ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯವರ್ತಿಗಳನ್ನು ಅಥವಾ ಏಜೆಂಟರನ್ನು ಸಂಪರ್ಕಿಸಬೇಡಿ ಎಂದು ತಹಶೀಲ್ದಾರ್ ಶಂಕರ್ ಗೌಡಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ನೇರವಾಗಿ ಸಂಬಂಧಿಸಿದ ಕೌಂಟರ್ ಗಳಲ್ಲಿ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಿ .
ಅರ್ಜಿಗಳನ್ನು ಟಪಾಲು ವಿಭಾಗದಲ್ಲಿ ನೇರವಾಗಿ ಸಲ್ಲಿಸಿ.ನಿಮ್ಮ ಕಡೆ ಸ್ವೀಕೃತ ಪ್ರತಿ ಇಟ್ಟುಕೊಳ್ಳಿ.
ನಿಮ್ಮ ಕೆಲಸಕ್ಕೆ, ದೂರುಗಳಿಗೆ ನೇರವಾಗಿ ತಹಶೀಲ್ದಾರ್ ಅಥವಾ ತಹಶೀಲ್ದಾರ್ ಕಚೇರಿ ಸಿಬ್ಬಂದಿಯನ್ನು ಭೇಟಿ ಆಗಿ.
ಅರ್ಜಿ ಅಥವಾ ಕಂದಾಯ ಇಲಾಖೆ ಸೇವೆಯ ಕುರಿತು ತಹಶೀಲ್ದಾರ್ ಹತ್ತಿರ ವಿಚಾರಿಸಲು ಬರುವಾಗ ಅರ್ಜಿಯ ಸ್ವೀಕೃತ ಪ್ರತಿ, ದಾಖಲೆಗಳನ್ನು ತೆಗೆದುಕೊಂಡು ಬನ್ನಿ
ಮಧ್ಯವರ್ತಿಗಳು ಅಥವಾ ಅನಧಿಕೃತ ಏಜೆಂಟರು ವಿವಿಧ ರೂಪಗಳಲ್ಲಿ ಇದ್ದಾರೆ. ಅವರಿಂದ ದೂರ ಇದ್ದು, ನೇರವಾಗಿ ಕಂದಾಯ ಇಲಾಖೆಯ ಸಿಬ್ಬಂದಿಗಳ ಮೂಲಕವೇ ಇಲಾಖೆಯ ಸೇವೆಗಳನ್ನು ಪಡೆಯುವಂತೆ ಮನವಿ ಮಾಡಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಮುಂಡಗೋಡದ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ಇವರು ಇಲಾಖೆಯಲ್ಲಿ ಕೇಳಿ ಬರುತ್ತಿದ್ದ ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರಯತ್ನ ಪಡುತ್ತಿದ್ದಾರೆ.
ಕಳೆದ ಕೆಲದಿನಗಳ ಹಿಂದೆ ‘ಮುಂಡಗೋಡ ಮಿಡಿಯಾ ಎಂಡ್ ಆಫಿಸರ್ಸ’ ಎಂಬ ವ್ಯಾಟ್ಸಪ್ ಗ್ರೂಪಿನಲ್ಲಿ ನಾನು ನನ್ನ ಯಾವುದೇ ಕೆಳಗಿನ ಸಿಬ್ಬಂದಿ ಕಡೆಯಿಂದ ಯಾವುದೇ ರೀತಿಯ ಹಣ ತೆಗೆದುಕೊಳ್ಳುವುದಿಲ್ಲ.ಇಲಾಖೆಯ ಯಾವುದೇ ಸಿಬ್ಬಂದಿ ನನ್ನ ಹೆಸರು ಹೇಳಿ ಸಾರ್ವಜನಿಕರಿಂದ ಹಣ ತೆಗೆದುಕೊಳ್ಳುತ್ತಿದ್ದರೆ ತಮ್ಮ ಗಮನಕ್ಕೆ ತರುವಂತೆಯೂ ಸಹ ಪ್ರಕಟಣೆ ನೀಡಿದ್ದರು.
ಮುಂಡಗೋಡದ ಪ್ರತಿಯೊಂದು ಇಲಾಖೆಯಲ್ಲಿಯೂ ಸಹ ಇಂತಹ ದಕ್ಷ ಅಧಿಕಾರಿಗಳು ಇದ್ದರೆ ಸರ್ಕಾರದ ಯೋಜನೆಗಳು ಸಾಮಾನ್ಯ ಜನರಿಗೆ ನೇರವಾಗಿ ತಲುಪಬಹುದು.ಮತ್ತು ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಮಾಡಬಹುದು ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ಕಂಡುಬರುತ್ತಿದೆ.
ವರದ:ಮಂಜುನಾಥ ಹರಿಜನ.

error: Content is protected !!