ಯುವಕನೊಬ್ಬ ತನ್ನ ಮೃತ ಗೆಳತಿಯನ್ನು ಅವಳ ಅಂತ್ಯಸಂಸ್ಕಾರದ ಸಮಯದಲ್ಲಿ ಮದುವೆಯಾಗಿರುವ ಘಟನೆ ನಡೆದಿದೆ. ಶೋಕತಪ್ತ ಪ್ರೇಮಿಯ ದುಃಖದ ವೀಡಿಯೊವನ್ನು ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮೊರಿಗಾಂವ್ ನಿವಾಸಿ ಬಿಟುಪನ್ ತಮುಲಿ (27) ಎಂಬಾತ ಚಪರ್ಮುಖ್ ನ ಕೊಸುವಾ ಗ್ರಾಮದ ಪ್ರಾರ್ಥನಾ ಬೋರಾ (24) ಎಂಬಾಕೆಯೊಂದಿಗೆ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದ.
ಇತ್ತೀಚೆಗೆ ಪ್ರಾರ್ಥನಾ ಅನಾರೋಗ್ಯಕ್ಕೆ ತುತ್ತಾಗಿ ಗುವಾಹಟಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲಿ ಅವರು ಶುಕ್ರವಾರ ನಿಧನರಾದರು ಎನ್ನಲಾಗಿದೆ. ಬಿಟುಪನ್ ತನ್ನ ಭಾವಿ ಪತ್ನಿಯ ನಿಧನದ ಬಗ್ಗೆ ತಿಳಿದಾಗ, ಅವನು ಅವಳ ಮನೆಗೆ ಧಾವಿಸಿ ಅವಳ ಅಂತ್ಯಸಂಸ್ಕಾರದ ಸಮಯದಲ್ಲಿ ಅವಳ ಹೆಣದೊಂದಿಗೆ ಮದುವೆಯಾದನು ಎನ್ನಲಾಗಿದೆ. ಈ ಮೂಲಕ ಅವಳ ಜೀವನಪರ್ಯಂತದ ಆಸೆಯನ್ನು ಪೂರೈಸಿದ್ದಾನೆ ಎನ್ನಲಾಗಿದೆ