ಚಾಮರಾಜನಗರ ಜಿಲ್ಲೆಯ ಕುದುರೆ ಗ್ರಾಮದಿಂದ ದಸರಾ ಸಂದರ್ಭದಲ್ಲಿ ಫಲ ಪುಷ್ಪ ಪ್ರದರ್ಶನ ನೋಡಲು ಭಾನುಮತಿ ಎಂಬುವವರು ಕುಟುಂಬ ಸಮೇತರಾಗಿ ಬಂದಿರುತ್ತಾರೆ. ಫಲಪುಷ್ಪ ಪ್ರದರ್ಶನ ನೋಡಲು ಕಾರಿನಲ್ಲಿ ಬಂದಿದ್ದು ಕಾರನ್ನು ಆದಾಯ ತೆರಿಗೆ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಪಾರ್ಕ್ ಮಾಡಿ ಹೋಗಿರುತ್ತಾರೆ. ಕಾರಿನ ಒಳಗಡೆ ವ್ಯಾನಿಟಿ ಬ್ಯಾಗ್ ನಲ್ಲಿ ಸುಮಾರು 163 ಗ್ರಾಂ ತೂಕದ ಚಿನ್ನಾಭರಣಗಳನ್ನು ಇಟ್ಟಿದ್ದು ಅದನ್ನು ಕಳ್ಳತನ ಮಾಡಲಾಗಿರುತ್ತದೆ.
ಈ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನನ್ನು ಹುಡುಕಲು ಮುಂದಾಗಿರುತ್ತಾರೆ.
ದಿನಾಂಕ 19/11/2022 ರಂದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಆರೋಪಿ ಎಸ್ ಎನ್ ಕಿಶೋರ್ ಕುಮಾರ್ ನನ್ನ ಮೈಸೂರು ನಗರ ನಜರಾಬಾದ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಹಾಗೂ ಆತನ ಬಳಿ 163 ಗ್ರಾಂ ತೂಕದ ಚಿನ್ನಾಭರಣಗಳು ಸೇರಿ ಒಟ್ಟು 7 ಲಕ್ಷ ಬೆಳೆಬಾಳುವ ಮಾಲುಗಳನ್ನು ವಶಪಡಿಸಿಕೊಂಡಿರುತ್ತಾರೆ.